ಇತರೆ
ಕುಂದಾಪುರ: ವಕ್ವಾಡಿ ಕಾಡಿನಲ್ಲಿ ಧಗಧಗನೇ ಉರಿದ ಬೆಂಕಿ; ಮರ ಗಿಡಗಳು ಬೆಂಕಿಗಾಹುತಿ
Views: 200
ಕನ್ನಡ ಕರಾವಳಿ ಸುದ್ದಿ :ಬೇಸಿಗೆ ಆರಂಭವಾಗುತ್ತಿದ್ದಂತೆ ಕಾಡ್ಗಿಚ್ಚಿನ ಪ್ರಕರಣ ಹೆಚ್ಚಾಗಿದೆ.ವಕ್ವಾಡಿ ಹತ್ತಿರ ಆಲ್ ಅರೀಫ್ ಪೌಲ್ಟಿ ಸಮೀಪದ ಕಾಡಿಗೆ ಕಾಡ್ಗಿಚ್ಚು ಪ್ರಸಹರಿಸಿ ಭಾರೀ ಪ್ರಮಾಣದ ಗಿಡ ಮರಗಳು ಬೆಂಕಿಗಾಹುತಿಯಾದ ಘಟನೆ ಮಾರ್ಚ್ 24ರ ಸಂಜೆ ಸಂಭವಿಸಿದೆ.
ಕುಂದಾಪುರ ಅಗ್ನಿ ಶಾಮಕ ದಳದವರು ಬೆಂಕಿಯನ್ನು ನಿಯಂತ್ರಿಸಿದರು. ಈ ಭಾಗದಲ್ಲಿ ಚಿರತೆ ಮರಿ ವಾಸವಾಗಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅವುಗಳನ್ನು ರಕ್ಷಿಸಲು ಅಗ್ನಿ ಶಾಮಕ ಇಲಾಖೆ ಮುಂದಾದರೂ ರಾತ್ರಿ ಆದಕಾರಣ ಹುಡುಕೋದು ಕಷ್ಟವಾಯಿತು.
ಯಾರಾದ್ರೂ ಉದ್ದೇಶಪೂರ್ವಕವಾಗಿ ಕಾಡಿಗೆ ಬೆಂಕಿ ಹಚ್ಚಿದ್ದರೆ, ಪತ್ತೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.






