ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿಚಾರ ಪ್ರಶ್ನೆ: ಪ್ರಿಯಕರನಿಂದ ಪತಿ ಹತ್ಯೆ
Views: 41
ಕನ್ನಡ ಕರಾವಳಿ ಸುದ್ದಿ: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿಚಾರವನ್ನು ಪ್ರಶ್ನಿಸಿದ ಪತಿಯನ್ನು ಪ್ರಿಯಕರನೇ ಹತ್ಯೆ ಮಾಡಿದ ಘಟನೆ ತಾಲೂಕಿನ ಹೊಸಹಳ್ಳಿ ಸಮೀಪ ಬೆಳಕಿಗೆ ಬಂದಿದೆ.
ತಾಲೂಕಿನ ಚಾಮನಹಳ್ಳಿ ತಾಂಡದ ನಿವಾಸಿ ಸಾಗರ್ ರಾಠೋಡ್ (30) ಹತ್ಯೆಗೆ ಒಳಗಾದ ವ್ಯಕ್ತಿ. ಅದೇ ತಾಂಡದ ರೆಡ್ಡಿ ರಾಠೋಡ್ ಆರೋಪಿಯಾಗಿದ್ದು ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಒಂದು ವರ್ಷದಿಂದ ಸಾಗರ್ ಪತ್ನಿಯೊಂದಿಗೆ ರೆಡ್ಡಿ ಅಕ್ರಮ ಸಂಬಂಧ ಹೊಂದಿದ್ದನು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಆಗಾಗ ಗಲಾಟೆಗಳು ನಡೆಯುತ್ತಿದವು. ನಿನ್ನೆ ರಾತ್ರಿ ವೈಷಮ್ಯ ತೀವ್ರಗೊಂಡು, ರೆಡ್ಡಿ ರಾಠೋಡ್ ಸಾಗರ್ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದಾನೆ. ನಂತರ ಈ ಕೃತ್ಯವನ್ನು ಅಪಘಾತದಂತೆ ತೋರಿಸಲು ಆಟೋಗೆ ಹಾನಿ ಮಾಡಿ, ಮೃತದೇಹವನ್ನು ಸ್ವಲ್ಪ ದೂರದಲ್ಲಿ ಹಾಕಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಆದರೆ ಪ್ರಕರಣದ ಬಗ್ಗೆ ಅನುಮಾನಗೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ಸತ್ಯ ಹೊರಬಂದಿದೆ.
ಈ ಕುರಿತು ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






