ಮದುವೆಗೆ ಯುವತಿ ನಿರಾಕರಣೆ,ಮನೆಗೆ ನುಗ್ಗಿ ಯುವಕ ಮನಬಂದಂತೆ ಹಲ್ಲೆ
Views: 29
ಕನ್ನಡ ಕರಾವಳಿ ಸುದ್ದಿ: ಮದುವೆಯಾಗುವಂತೆ ಪೀಡಿಸುವ ಯುವಕನನ್ನು ಯುವತಿ ಮದುವೆಯಾಗಲು ನಿರಾಕರಿಸಿದ ಯುವತಿ ಹಾಗೂ ಆಕೆಯ ಕುಟುಂಬಸ್ಥರ ಮೇಲೆ ಯುವಕನೋರ್ವ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕೇರೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ತಾಲೂಕಿನ ಜೋಡಕುರಳಿ ಗ್ರಾಮದ ನಿವಾಸಿ ಬೀರಪ್ಪ ಕಜ್ಜನವರ ಹಲ್ಲೆ ಮಾಡಿರುವ ಆರೋಪ
ಈತ ಕೇರೂರು ಗ್ರಾಮದ ವಿದ್ಯಾಶ್ರೀ ಕಿಲಾರಿ ಎಂಬ ಯುವತಿಯನ್ನು ಮದುವೆಯಾಗುವಂತೆ ಪದೇ ಪದೇ ಪೀಡಿಸುತ್ತಿದ್ದ. ಆದರೆ ಯುವತಿ ಇದಕ್ಕೆ ಸಮ್ಮತಿಸಿರಲಿಲ್ಲ. ಮಂಗಳವಾರ ರಾತ್ರಿ ಎಂಟು ಜನರೊಂದಿಗೆ ಯುವತಿಯ ಮನೆಗೆ ನುಗ್ಗಿ ಕಣ್ಣಿಗೆ ಖಾರದಪುಡಿ ಎರಚಿ ವಿದ್ಯಾಶ್ರೀ ಕಿಲಾರಿ, ತಂದೆ ಮಹಾದೇವ ಕಿಲಾರಿ, ತಾಯಿ ಶೋಭಾ ಕಿಲಾರಿ ಹಾಗೂ ತಮ್ಮ ವಿಜಯದ ಮೇಲೆಯೂ ಮನಬಂದಂತೆ ಹಲ್ಲೆ ನಡೆಸಿದ್ದಾನೆ . ಹಲ್ಲೆಯಿಂದ ವಿದ್ಯಾಶ್ರೀಗೆ ಗಂಭೀರ ಗಾಯಗಳಾಗಿದ್ದರೆ, ಆಕೆಯ ತಂದೆ-ತಾಯಿಗೂ ಸಣ್ಣಪುಟ್ಟ ಗಾಯದ ಗುರುತು. ಗಾಯಾಳುಗಳ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪ್ರಕರಣ ದಾಖಲಾಗಿದೆ.






