ಶಿಕ್ಷಣ

ಬಸ್ರೂರು ಶಾರದಾ ಕಾಲೇಜಿನ ಸಂಚಾಲಕರಾಗಿ ಅನುಪಮಾ  ಎಸ್.ಶೆಟ್ಟಿ ಆಯ್ಕೆ

Views: 158

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಬಸ್ರೂರು ಶಾರದಾ ಕಾಲೇಜಿನ ನೂತನ ಸಂಚಾಲಕರಾಗಿ ಅನುಪಮಾ ಎಸ್.ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.

ಫೆ.11ರಂದು ನಡೆದ ಶ್ರೀ ಶಾರದಾ ಕಾಲೇಜು ಟ್ರಸ್ಟ್ ಇದರ ಸಭೆಯಲ್ಲಿ ಹಿಂದಿನ ಆಡಳಿತ ಮಂಡಳಿಯ ಸಂಚಾಲಕರಾಗಿದ್ದ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ನೂತನ ಸಂಚಾಲಕರ ಆಯ್ಕೆ ನಡೆಸಲಾಗಿತ್ತು. ಆಡಳಿತ ಮಂಡಳಿಯ ನೂತನ ಆಯ್ಕೆಯಾದ ಸಂಚಾಲಕರಾಗಿ ಅನುಪಮಾ ಎಸ್.ಶೆಟ್ಟಿ ಅವರು ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾಗಿ ಕಾಲೇಜಿನ ಅಭಿವೃದ್ಧಿಗೆ ಅವರು ಸೇವೆ ಸಲ್ಲಿಸಿದ್ದಾರೆ.

ಬಾಂಡ್ಯಾ ಎಜುಕೇಶನಲ್ ಟ್ರಸ್ಟನ ಜಂಟಿ ಕಾರ್ಯನಿರ್ವಾಹಕಿಯಾಗಿದ್ದು ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ದತ್ತು ಸ್ವೀಕಾರ ಮಾಡಿರುವ ಬಾಂಡ್ಯಾ – ಕೊಡ್ಲಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ದಿಗೂ ಸಾಕಷ್ಟು ಕೊಡುಗೆ ನೀಡಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.

Related Articles

Back to top button
error: Content is protected !!