ಇತರೆ
ಕುಂದಾಪುರ:ವಡೇರಹೊಬಳಿಯಲ್ಲಿ ಪಂಪ್ ರಿಪೇರಿ ಮಾಡಲು ಹೋಗಿ ಕಾಲು ಜಾರಿ ಬಾವಿಗೆ ಬಿದ್ದು ಸಾವು
Views: 193
ಕನ್ನಡ ಕರಾವಳಿ ಸುದ್ದಿ: ಕುಂದಾಫುರದ ವಡೇರಹೊಬಳಿಯಲ್ಲಿ ಪಂಪ್ ರಿಪೇರಿ ಮಾಡಲು ಹೋಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಹಂಗಳೂರು ಗ್ರಾಮದ ನಾಗರಾಜ (51) ಮೃತಪಟ್ಟವರು.
ದಿನಾಂಕ 30/01/2026 ರಂದು ಬೆಳಿಗ್ಗೆ ಸುಮಾರು 11:30 ಗಂಟೆಗೆ ಮನೆಯ ಬಾವಿಯೊಳಗಿನ ಸಬ್ ಮರಸಿಬಲ್ ಪಂಪ್ ಅನ್ನು ರಿಪೇರಿ ಮಾಡಲು ತೆಗೆಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯೊಳಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.






