ಇತರೆ

ಕುಂದಾಪುರ: ಕಾಳಾವರ ಶಾಲೆಯ ಬಳಿ ರಾತ್ರಿ ಮಲಗಿದಲ್ಲೇ ವ್ಯಕ್ತಿ ಸಾವು

Views: 173

ಕುಂದಾಪುರ, ಜ. 29: ಕಾಳಾವರ ಶಾಲೆ ಬಳಿಯ ನಿವಾಸಿ ನಾಗರಾಜ (53) ಅವರು ಜ. 28ರ ರಾತ್ರಿ ಮಲಗಿದಲ್ಲೇ ಮೃತಪಟ್ಟಿದ್ದಾರೆ.

‘ಸುಮಾರು 20 ವರ್ಷಗಳಿಂದ ಉಬ್ಬಸ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ನಾಲೈದು ದಿನಗಳಿಂದ ಉಲ್ಬಣವಾಗಿತ್ತು.

ಬುಧವಾರ ಚಾಲನಾ ಕೆಲಸಕ್ಕೆ ತೆರಳಿ ಸಂಜೆ ಮನೆಗೆ ಮರಳಿದವರು ಮಾತ್ರೆ ತೆಗೆದುಕೊಂಡು ಮಲಗಿದ್ದರು. ಪತ್ನಿ ಬೆಳಗ್ಗೆ ಎದ್ದು ನೋಡಿದಾಗ ಪತಿ ಕೊನೆಯುಸಿರೆಳೆದಿದ್ದರು.

ತಾಯಿ ಗಿರಿಜಾ ಅವರು ನೀಡಿದ ದೂರಿನಂತೆ ದಿನಾಂಕ: 28.01.2026 ರಂದು ರಾತ್ರಿ ಸುಮಾರು 9:00 ಗಂಟೆಗೆ ಮನೆಯಲ್ಲಿ ಊಟ ಮಾಡಿ ಮಲಗಿದ್ದವರು ಉಬ್ಬಸ ಕಾಯಿಲೆಯಿಂದಲೋ ಅಥವಾ ಬೇರೆ ಯಾವುದೋ ಆರೋಗ್ಯ ಸಮಸ್ಯೆಯಿಂದಲೋ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಯುಡಿಆರ್‌ ಕ್ರಮಾಂಕ 04/2026 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.

Related Articles

Back to top button
error: Content is protected !!