ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್..! ಡೆತ್‌ನೋಟ್‌ನಲ್ಲಿ ಏನಿದೆ?
Views: 100
ಕನ್ನಡ ಕರಾವಳಿ ಸುದ್ದಿ: ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಬರೆದಿಟ್ಟಿದ್ದ ಡೆತ್ ನೋಟ್ ಇದೀಗ ಪತ್ತೆಯಾಗಿದೆ.
ಜ.9ರಂದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿ ದ್ದಳು. ಈ ಕುರಿತು ಮೃತಳ ತಾಯಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ಆರೋಪಿಸಿ, ಕಣ್ಣು ನೋವಿನಿಂದ ಕಾಲೇಜಿಗೆ ರಜೆ ಹಾಕಿದ್ದಕ್ಕೆ ತರಗತಿಯಲ್ಲಿ ಅವಮಾನಿಸಿದ್ದಾರೆ ಹಾಗೂ ಅವರ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದರು. ಆದರೆ ಇದೀಗ ಡೆತ್‌ನೋಟ್ ಸಿಕ್ಕಿದೆ. ಮೃತ ಯಶಸ್ವಿನಿ ಡೆತ್‌ನೋಟ್‌ನಲ್ಲಿ ನಾನು ಬದುಕಲಿಕ್ಕೆ ಯೋಗ್ಯಳಲ್ಲ, ಕ್ಷಮಿಸಿಬಿಡಿ. ನನ್ನ ಸಾವಿಗೆ ಯಾರೂ ಕಾರಣರಲ್ಲ. ನಾನು ಒಳ್ಳೆಯ ಮಗಳಲ್ಲ. ಅಮ್ಮ ಥ್ಯಾಂಕ್ ಯು ಸೋ ಮಚ್ ಎಂದು ಬರೆದಿದ್ದಾಳೆ.
ಹೌದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಯಶಸ್ವಿನಿ ಕಣ್ಣೀರು ಹಾಕಿದ ವಿಡಿಯೋ ವೈರಲ್ ಆಗಿದೆ.ಪರೀಕ್ಷೆಯ ವೇಳೆ ಓಎಂಆರ್ ಶೀಟ್ ಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ್ದಾಳೆ.






