ಉಡುಪಿ: ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ, ಮಹಿಳೆ ಸಾವು
Views: 114
ಕನ್ನಡ ಕರಾವಳಿ ಸುದ್ದಿ:ಉದ್ಯಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೇರು ಬೀಜ ಪ್ಯಾಕ್ಟರಿಗೆ ಕೆಲಸಕ್ಕೆ ಹೋಗಿ ಬರುತ್ತಿದ್ದ ವೇಳೆ ಬೈಕ್ ಡಿಕ್ಕಿಯಾಗಿ ಮಹಿಳೆ ಸಾವನಪ್ಪಿದ ಘಟನೆ ಜ.9 ರಂದು ನಡೆದಿದೆ
ಉದ್ಯಾವರ ಗ್ರಾಮದ ನಿವಾಸಿ ಜಲಜಾಕ್ಷಿ(65) ಮೃತಪಟ್ಟವರು.
ಗೇರು ಬೀಜ ಪ್ಯಾಕ್ಟರಿಗೆ ಕೆಲಸಕ್ಕೆ ಹೋಗಿ ಮನೆಗೆ ಬರುವಾಗ ಸಮಯ ಸುಮಾರು 6:30 ಗಂಟೆಗೆ ಉದ್ಯಾವರ ಗ್ರಾಮದ ಬೋಳ್ಜೆ ಗರಡಿ ಕ್ರಾಸ್ ಬಳಿ ಶಕ್ತಿ ಗ್ರಾನೆಟ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66 ರ ಪಶ್ಚಿಮ ಬದಿಯ ಮಂಗಳೂರು- ಉಡುಪಿ ರಸ್ತೆಯನ್ನು ದಾಟಿ, ಉಡುಪಿ- ಮಂಗಳೂರು ರಸ್ತೆಯನ್ನು ದಾಟುತ್ತಿದ್ದ ಸಮಯ ಉಡುಪಿ ಕಡೆಯಿಂದ ಓರ್ವ ಬೈಕನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಜಲಜಾಕ್ಷಿರವರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ಪರಿಣಾಮ ಜಲಜಾಕ್ಷಿರವರು ರಸ್ತೆಗೆ ಬಿದ್ದು ಅವರ ತಲೆಗೆ ಹಾಗೂ ದೇಹದ ಇತರ ಭಾಗಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿರುತ್ತದೆ. ಕೂಡಲೇ ಅವರನ್ನು ಕಿಶೋರ್ ರವರು ತಮ್ಮ ರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿಯ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಜಲಜಾಕ್ಷಿ(65) ರವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.






