ಇತರೆ

ಒಂದೇ ದಿನ ಇಬ್ಬರು ಪೊಲೀಸ್‌ ಪೇದೆಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ!

Views: 200

ಕನ್ನಡ ಕರಾವಳಿ ಸುದ್ದಿ: ರಾಜ್ಯದಲ್ಲಿ ಒಂದೇ ದಿನದಲ್ಲಿ ಇಬ್ಬರು ಪೊಲೀಸ್‌ ಕಾನ್‌ಸ್ಟೇಬಲ್‌ಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗದಲ್ಲಿ ಮೊಹಮ್ಮದ್ ಝಕ್ರಿಯ ಎಂಬ ಸಂಚಾರಿ ಪೊಲೀಸ್‌ ಪೇದೆ ಠಾಣೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮದ್ದೂರಿನಲ್ಲಿರಮೇಶ್‌ ಎಂಬವರು ವಿಶ್ರಾಂತಿ ಗೃಹದಲ್ಲಿರುವ ಫ್ಯಾನ್‌ಗೆ ನೇಣು ಬಿಗಿದುಕೊಂಡು ಪ್ರಾಣ ತೆಗೆದುಕೊಂಡಿದ್ದಾರೆ.

ಶಿವಮೊಗ್ಗದ ಸಂಚಾರಿ ಪೊಲೀಸ್‌ ಠಾಣೆಯಲ್ಲಿಯೇ ಮೊಹಮ್ಮದ್ ಝಕ್ರಿಯ ಎಂಬ ಪೊಲೀಸ್‌ ಕಾನ್‌ಸ್ಟೇಬಲ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ರಜೆಯಲ್ಲಿ ಇದ್ದರು. ಮೂರು ದಿನದ ಹಿಂದೆಯಷ್ಟೇ ಮೊಹಮ್ಮದ್ ಡ್ಯೂಟಿಗೆ ಹಾಜರಾಗಿದ್ದರು. ಬಸ್ ನಿಲ್ದಾಣದ ಬಳಿ ಡ್ಯೂಟಿ ಮುಗಿಸಿ ಬಂದು ಪೊಲೀಸ್ ಠಾಣೆಯ ಹಿಂಬದಿಯ ಸೆಲ್ ಇರುವ ಜಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದ್ದೂರು ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ರಮೇಶ್ (35) ಎಂಬವರು ನಗರದ ಪೊಲೀಸ್ ಠಾಣೆಯ ಹಿಂದೆ ಇರುವ ವಿಶ್ರಾಂತಿ ಗೃಹದಲ್ಲಿರುವ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ರಾತ್ರಿ 10 ಘಂಟೆಗೆ ಪೊಲೀಸ್ ಪೇದೆಯೊಬ್ಬರು ವಿಶ್ರಾಂತಿ ಗೃಹಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.

ಮೃತ ಪೇದೆ ರಮೇಶ್ ಹಾಗೂ ದೂರು ದಾಖಲಾಗಿರುವ ಮಹೇಶ್ ಇಬ್ಬರೂ ನಗರದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಹಾಗೂ ಇಬ್ಬರೂ ಪೊಲೀಸ್ ಠಾಣೆಯ ಪೊಲೀಸ್ ವಸತಿಗೃಹದ ನಿವಾಸಿಗಳಾಗಿದ್ದರು ಎನ್ನಲಾಗಿದೆ.

Related Articles

Back to top button
error: Content is protected !!