ಕ್ರೀಡೆ

ಶಿಖ‌ರ್ ಧವನ್- ಐರಿಶ್ ಸುಂದರಿ ಸೋಫಿ ಶೈನ್ ಜೊತೆ ಹೊಸ ಜೀವನಕ್ಕೆ ಸಜ್ಜು!

Views: 53

ಕನ್ನಡ ಕರಾವಳಿ ಸುದ್ದಿ: ಟೀಂ ಇಂಡಿಯಾದ ಮಾಜಿ ಸ್ಫೋಟಕ ಆರಂಭಿಕ ಅವರು ಜೀವನದ ದ್ವಿತೀಯ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಡೇಟಿಂಗ್ ಮಾಡುತ್ತಿದ್ದ ಐರಿಶ್ ಸುಂದರಿ ಸೋಫಿ ಶೈನ್ ರೊಂದಿಗೆ ಧವನ್ ವಿವಾಹವಾಗಲಿದ್ದಾರೆ

ಮೂಲಗಳ ಪ್ರಕಾರ, ಧವನ್ ಮತ್ತು ಸೋಫಿ ಅವರ ವಿವಾಹ ಸಮಾರಂಭವು ಫೆಬ್ರವರಿ ಮೂರನೇ ವಾರದಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ನಡೆಯಲಿದೆ. ಈ ಮದುವೆಯಲ್ಲಿ ಕ್ರಿಕೆಟ್ ಲೋಕದ ಗಣ್ಯರು ಹಾಗೂ ಬಾಲಿವುಡ್‌ ತಾರೆಯರು ಭಾಗವಹಿಸುವ ನಿರೀಕ್ಷೆಯಿದೆ. ಮದುವೆಯ ತಯಾರಿಗಳು ಈಗಾಗಲೇ ಭರದಿಂದ ಸಾಗುತ್ತಿದ್ದು, ಧವನ್‌ ಅವರೇ ಖುದ್ದಾಗಿ ಎಲ್ಲಾ ಸಿದ್ಧತೆಗಳ ಮೇಲೆ ನಿಗಾ ಇರಿಸಿದ್ದಾರೆ ಎನ್ನಲಾಗಿದೆ.

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳ ವೇಳೆ ಧವನ್ ಮತ್ತು ಸೋಫಿ ಒಟ್ಟಿಗೆ ಕಾಣಿಸಿಕೊಂಡಾಗ ಇವರ ಸಂಬಂಧದ ಕುರಿತು ಮೊದಲ ಬಾರಿಗೆ ಗಾಳಿ ಸುದ್ದಿಗಳು ಹಬ್ಬಿದ್ದವು. ಇದಾದ ಬಳಿಕ ಕಾರ್ಯಕ್ರಮವೊಂದರಲ್ಲಿ ಧವನ್ ತಮ್ಮ ಪ್ರೀತಿಯ ವಿಚಾರವನ್ನು ಬಹಿರಂಗಪಡಿಸಿದ್ದರು. ಕೆಲವು ವರ್ಷಗಳ ಹಿಂದೆ ದುಬೈನಲ್ಲಿ ಭೇಟಿಯಾಗಿದ್ದ ಈ ಜೋಡಿ, ಕಳೆದ ಹಲವು ಸಮಯದಿಂದ ಲಿವಿಂಗ್ ಟುಗೆದರ್‌ನಲ್ಲಿದ್ದರು ಎಂದು ಹೇಳಲಾಗುತ್ತಿದೆ.

ಶಿಖ‌ರ್ ಧವನ್ ಈ ಹಿಂದೆ ಆಯೇಷಾ ಮುಖರ್ಜಿ ಅವರನ್ನು ವಿವಾಹವಾಗಿದ್ದರು. 2023 ರಲ್ಲಿ ಈ ದಂಪತಿಗಳು ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿದ್ದರು. ಅವರಿಗೆ 11 ವರ್ಷದ ಜೋರಾವರ್ ಧವನ್ ಎಂಬ ಮಗನಿದ್ದಾನೆ. ವೈಯಕ್ತಿಕ ಜೀವನದ ಏರಿಳಿತಗಳ ನಡುವೆಯೂ ಧವನ್ ಇದೀಗ ಸೋಫಿ ಅವರೊಂದಿಗೆ ಹೊಸ ಜೀವನ ಆರಂಭಿಸಲು ಸಜ್ಜಾಗಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ.

Related Articles

Back to top button
error: Content is protected !!