ಶಿಕ್ಷಣ

ಶ್ರೀ ಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಅಮೃತ ಹಸ್ತದಿಂದ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭ

Views: 22

ಕನ್ನಡ ಕರಾವಳಿ ಸುದ್ದಿ, 

ಕಿರಿಮಂಜೇಶ್ವರ:ಡಿಸೆಂಬರ್ 18 ರಂದು ಗುರುವಂದನ ಕಾರ್ಯಕ್ರಮವು ಅದ್ಧೂರಿಯಿಂದ ನಡೆಯಿತು. ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ನೂತನ ಕಟ್ಟಡಗಳನ್ನು ಉದ್ಘಾಟಿಸಿದ ಶ್ರೀ ಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿ ಧಾನಂಗಳವರು ಪ್ರತಿಯೊಬ್ಬರು ಸಮಾಜದಲ್ಲಿ ವಿದ್ಯಾಭ್ಯಾಸ, ಸದೌಷಧ, ದಾನ ಎಂಬ ಕೆಲಸದ ಕಡೆ ಪ್ರಯತ್ನಶೀಲರಾಗಿರಬೇಕು. ಹಾಗೆಯೇ ಹಣಬಲ, ಜನಬಲದ ಜೊತೆಗೆ ಅದನ್ನು ಮುನ್ನೆಡೆಸುವ ಸಮರ್ಥ ನಾಯಕನಿದ್ದಾಗ ಎಲ್ಲಾ ಕೆಲಸಗಳಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಆ ಸಮಯವನ್ನು ಸದುಪಯೋಗ ಮಾಡಿಕೊಳ್ಳಬೇಕು. ಎಲ್ಲರೂ ಧರ್ಮ ಮಾರ್ಗದಲ್ಲಿ ನಡೆದು ಜೀವನವನ್ನು ನಡೆಸಬೇಕು ಎಂದು ಹೇಳುತ್ತಾ ಸರ್ವರನ್ನು ಅನುಗ್ರಹಿಸಿ ಆಶೀರ್ವದಿಸಿದರು.

ಈ ವೈಭವದ ಕಾರ್ಯಕ್ರಮದಲ್ಲಿ ಜನತಾ ಸಮೂಹ ಸಂಸ್ಥೆಗಳ ಮುಖ್ಯಸ್ಥರಾಗಿರುವ ಗಣೇಶ್ ಮೊಗವೀರರು, ಕಾರ್ಯದರ್ಶಿಯಾಗಿರುವ ಶ್ಯಾಮಲಾ ಗಣೇಶ್ ಮೊಗವೀರರು, ಮುಖ್ಯ ಶಿಕ್ಷಕಿಯಾಗಿರುವ ದೀಪಿಕಾ ಆಚಾರ್ಯ, ಜನತಾ ಸಮೂಹ ಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ವೃಂದದವರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಊರಿನ ಸಮಸ್ತ ಜನರು ಭಾಗವಹಿಸಿದ್ದರು.

ಈ ಕಾರ್ಯಕ್ರಮವನ್ನು ಉಪನ್ಯಾಸಕರಾಗಿರುವ ಉದಯ್ ನಾಯಕ್ ಸ್ವಾಗತಿಸಿ, ಧಾರ್ಮಿಕ ಮುಖಂಡರಾಗಿರುವ ದಾಮೋದರ್ ಶರ್ಮ ರವರು ನಿರೂಪಣೆ ಮಾಡಿದರು.

Related Articles

Back to top button