ಬ್ರಹ್ಮಾವರ: ಆಟೋ- ಬೈಕ್ ಡಿಕ್ಕಿ ಸವಾರ ಸಾವು
Views: 162
ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರ ಸಮೀಪ ಬೈಕಿಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟವರು ಚಾರ್ಲಿ ಮಸ್ಕರೇನಸ್ (40) ಎಂದು ತಿಳಿದು ಬಂದಿದೆ.
ಮೊಟಾರ್ ಸೈಕಲ್ ನಲ್ಲಿ ಹಾವಂಜೆ ಪೆಟ್ರೋಲ್ ಬಂಕ್ ನಿಂದ ಹಾವಂಜೆ – ಕೊಳಲಗಿರಿ ಮಾರ್ಗವಾಗಿ ಅವರ ಮನೆ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ಹಾವಂಜೆ ಗ್ರಾಮದ ಮುಗ್ಗೇರಿ ಮಠ ಕ್ರಾಸ್ ಹತ್ತಿರ ತಲುಪುವಾಗ ಅವರ ವಿರುದ್ಧ ದಿಕ್ಕಿನಲ್ಲಿ ಅಂದರೆ ಕೊಳಲಗಿರಿ ಕಡೆಯಿಂದ ರಾಜೇಂದ್ರ ಎಂಬವರು ಆಟೋ ರಿಕ್ಷಾವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ತಿರುವು ರಸ್ತೆಯಲ್ಲಿ ಅವರ ತೀರಾ ಬಲ ಬದಿಗೆ ಚಲಾಯಿಸಿ ಎದುರಿನಿಂದ ಕೊಳಲಗಿರಿ ಕಡೆಗೆ ಚಾರ್ಲಿ ಮಸ್ಕರೇನಸ್ ರವರು ಸವಾರಿ ಮಾಡುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಚಾರ್ಲಿ ಮಸ್ಕರೇನಸ್ ರವರು ರಸ್ತೆಗೆ ಬಿದ್ದು, ಅವರ ತಲೆಗೆ, ಬೆನ್ನಿಗೆ ರಕ್ತ ಗಾಯವಾಗಿದ್ದು, ಮಣಿಪಾಲದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಚಾರ್ಲಿ ಮಸ್ಕರೇನಸ್ ರವರು ದಾರಿ ಮಧ್ಯೆಯೇ ಮೃತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿರುತ್ತಾರೆ.
ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.






