ಕಾಳಾವರ ಗ್ರಾಮ ಪಂಚಾಯತ್ ನಿಂದ ಬಡಾಗುಡ್ಡೆ ನಿವಾಸಿಗಳಿಗೆ ನೀರಿನ ಸಂಪರ್ಕ ಕಡಿತ,ರೊಚ್ಚಿಗೆದ್ದ ಜನರು ಪಂಚಾಯಿತಿಗೆ ಮುತ್ತಿಗೆ
Views: 285
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಾಗುಡ್ಡೆ ನಿವಾಸಿಗಳಿಗೆ ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರು ಸಂಪರ್ಕವನ್ನು ಕಡಿತಗೊಳಿಸಿದ ಕುರಿತು ಗ್ರಾಮ ಪಂಚಾಯತ್ ನಲ್ಲಿ ಬಡಾಗುಡ್ಡೆ ನಿವಾಸಿಗಳು ಗ್ರಾಮ ಪಂಚಾಯಿತಿಗೆ ಬಂದು ನ್ಯಾಯ ಕೇಳಿದ ಪ್ರಸಂಗ ನಡೆಯಿತು ಬಡಾಗುಡ್ಡೆ ಜನತಾ ಕಾಲೋನಿಯಲ್ಲಿ ಸುಮಾರು 15 -20 ವರ್ಷಗಳಿಂದ ವಾಸವಾಗಿರುವ ನಿವಾಸಿಗಳಿಗೆ ನೀರಿನ ಸಮಸ್ಯೆ ಅನ್ನೋದು ಸಾಮಾನ್ಯವಾಗಿ ಬಿಟ್ಟಿದೆ ಈ ಸಮಸ್ಯೆ ಪರಿಹಾರಕ್ಕೆ ಹಲವಾರು ವರ್ಷಗಳಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಿ ಎಂದು ಪಂಚಾಯತ್ ನಲ್ಲಿ ಹೇಳಿಕೊಂಡರು ಯಾವುದೇ ಪ್ರಯೋಜನವಾಗಲಿಲ್ಲ ಇಂದಿಗೂ ಕಲುಷಿತ ನೀರನ್ನು ಕುಡಿದುಕೊಂಡೆ ಬದುಕುವ ವ್ಯವಸ್ಥೆ ಆಗಿದೆ,
ಬಡಾಗುಡ್ಡೆ ಜನತಾ ಕಾಲೋನಿಯಲ್ಲಿ ನಿವಾಸಿಗಳು ಕುಡಿಯಲು ಯೋಗ್ಯವಲ್ಲದ ನೀರನ್ನು ಗ್ರಾಮ ಪಂಚಾಯಿತಿ ನೀಡುತ್ತಿರುವುದರಿಂದ ಪಂಚಾಯಿತಿಗೆ ನೀಡಬೇಕಾಗಿದ್ದ ನೀರಿನ ಕರವನ್ನು ನಿವಾಸಿಗಳು ಕೊಡುತ್ತಿರಲಿಲ್ಲ ಕಾರಣ ನಮ್ಮ ಬೇಡಿಕೆಯನ್ನು ಮೊದಲು ಈಡೇರಿಸಿ ಎಂದು ಅಹವಾಲು ಇಟ್ಟಿದ್ದಾರೆ.
ಬಿಲ್ ಕಟ್ಟದ ಮನೆಗಳ ಕುಡಿಯುವ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದಾಗಿ ನೋಟಿಸ್ ನೀಡಿ ನೀರಿನ ಸಂಪರ್ಕವನ್ನೇ ಕಡಿತಗೊಳಿಸಿ ಎಂಡ್ ಕ್ಯಾಪ್ ಹಾಕಿದ ಪ್ರಸಂಗ ನಡೆಯಿತು. ಈ ಸಂದರ್ಭದಲ್ಲಿ ರೊಚ್ಚಿಗೆದ್ದ ಜನ ಪಂಚಾಯಿತಿಗೆ ಹಿಡಿ ಶಾಪ ಹಾಕಿದರು ಕೆಲವರು ಪೊಲೀಸ್ ಠಾಣೆ ಮೆಟ್ಟಿಲೇರುವ ವಿಚಾರ ಕೂಡ ಚರ್ಚೆ ಮಾಡಿದರು ಇದಾದ ನಂತರ ಗ್ರಾಮ ಪಂಚಾಯತ್ ಡಿಸೆಂಬರ್ 11 ರಂದು ಬಡಾಗುಡ್ಡೆ ನಿವಾಸಿಗಳ ಹಾಗೂ ದಲಿತ ಸಮುದಾಯದವರ ಸಭೆ ಕರೆದು ಚರ್ಚಿಸುವ ಭರವಸೆ ಹಾಗೂ ತೀರ್ಮಾನ ಕೈಗೊಂಡರು.
ಗ್ರಾಮ ಪಂಚಾಯತ್ ಸಭಾಭವನದಲ್ಲಿ ಈ ಕುರಿತು ಚರ್ಚೆ ಮಾಡಿ ಒಂದು ಅಂತಿಮ ನಿರ್ಧಾರಕ್ಕೆ ಬರಲಾಯಿತು . ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ತಾವುಗಳು ಪಡೆಯುವ ತನಕ ನೀರಿನ ಕರವನ್ನು ಸದ್ಯ ಪಾವತಿಸುವುದು ಬೇಡ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಆದಮೇಲೆ ಅನುಕೂಲಕ್ಕೆ ತಕ್ಕಂತೆ ಕಟ್ಟಬೇಕು ಎಂದು ಆಶ್ವಾಸನೆ ನೀಡಲಾಯಿತು ಹಾಗೂ ದಲಿತ ಸಮುದಾಯದ ನೀರಿನ ಕರವನ್ನು ಸಭೆಯಲ್ಲಿ ತೀರ್ಮಾನಿಸುವುದಾಗಿ ತಿಳಿಸಲಾಯಿತು.
ಈ ಚರ್ಚೆ ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಜುನಾಥ ಶೆಟ್ಟಿಗಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ಮಂಜಯ್ಯ ಬಿಲ್ಲವ ಹಾಗೂ ಪಂಚಾಯತ್ ಉಪಾಧ್ಯಕ್ಷರು ಜೊತೆಗೆ ಸದಸ್ಯರಾದ ರಾಮಚಂದ್ರ ನಾವುಡ, ರಮೇಶ್ ಶೆಟ್ಟಿ ವಕ್ವಾಡಿ, ದಲಿತ ಸಮುದಾಯದ ಮುಂದಾಳುಗಳಾದ ಬಿ ಮೋಹನ್ ಚಂದ್ರ ಕಾಳಾವರ್ಕರ್ , MP ಸಂಜೀವ ಮಾಸ್ಟರ್, ಮಹೇಶ ಕೆಳಬೆಟ್ಟು, ಉಪಸ್ಥಿತರಿದ್ದರು.
ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿದರು ಒಂದೊಳ್ಳೆ ಆರೋಗ್ಯಕರವಾದ ತೀರ್ಮಾನದ ಕಾರಣ ಪರಸ್ಪರ ಧನ್ಯವಾದ ನೀಡಲಾಯಿತು. ಮುಂದಿನ ದಿನಗಳಲ್ಲಿ ಎಲ್ಲಾ ಬಡಾಗುಡ್ಡಿ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಆಗುವ ತನಕ ಯಾವುದೇ ಕರ ಕಟ್ಟುವ ನಿರ್ಧಾರ ಕೈ ಬಿಡಲಾಯಿತು ಹಾಗೂ ನಿರಂತರವಾಗಿ ಇರುವ ನೀರಿನ ವ್ಯವಸ್ಥೆ ಮಾಡುವುದೆಂದು ತೀರ್ಮಾನಿಸಲಾಯಿತು.












