ಶಿಕ್ಷಣ

ಕಾರ್ಕಳ:ವಿದ್ಯಾರ್ಥಿಗಳಿಗೆ ನಿರಂತರ ಕಿರುಕುಳ ನೀಡಿದ ಶಿಕ್ಷಕ ಕರ್ತವ್ಯದಿಂದ ವಜಾ

Views: 195

ಕನ್ನಡ ಕರಾವಳಿ ಸುದ್ದಿ :ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಶಿಕ್ಷಕನ್ನೊಬ್ಬನನ್ನು ವಜಾಗೊಳಿಸಿದ  ಘಟನೆ ಕಾರ್ಕಳದ ಮಿಯಾರು ಗ್ರಾಮದಲ್ಲಿ ನಡೆದಿದೆ.

ಮಿಯಾರು ಮೊರಾರ್ಜಿ ದೇಸಾಯಿ ಇಂಗ್ಲೀಷ್‌ ಮೀಡಿಯಂ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಕಲಬುರ್ಗಿ ಮೂಲದ ಮದರಸ್ ಮಕಾಂದಾ‌ರ್ ಕರ್ತವ್ಯದಿಂದ ವಜಾಗೊಂಡ ಶಿಕ್ಷಕ.

ವಸತಿ ಶಾಲಾ ವಿದ್ಯಾರ್ಥಿಗಳಿಗೆ ನಿರಂತರ ಬಸ್ಕಿ ಹೊಡೆಸಿರುವುದಲ್ಲದೇ, ಜನಿವಾರ ಮತ್ತು ಕೈಗೆ ಕಟ್ಟುವ ದಾರದ ಬಗ್ಗೆ ಪ್ರಶ್ನಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ, ಪ್ರಾಂಶುಪಾಲರು ಎಚ್ಚರಿಕೆ ನೀಡಿದರೂ ಸಹ  ಆತ ಇದೇ ಚಾಳಿ ಮುಂದುವರಿಸಿದ ಹಿನ್ನೆಲೆಯಲ್ಲಿ ಕರ್ತವ್ಯದಿಂದ ವಜಾಗೊಳಿಸಿ ಪ್ರಾಂಶುಪಾಲರು ಆದೇಶಿಸಿದ್ದಾರೆ.

ವಸತಿ ಶಾಲಾ ವಿದ್ಯಾರ್ಥಿಗಳಿಗೆ ನಿರಂತರ ಬಸ್ಕಿ ಹೊಡೆಸಿರುವುದಲ್ಲದೇ, ಜನಿವಾರ ಮತ್ತು ಕೈಗೆ ಕಟ್ಟುವ ದಾರದ ಬಗ್ಗೆ ಪ್ರಶ್ನಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ, ಪ್ರಾಂಶುಪಾಲರು ಎಚ್ಚರಿಕೆಯನ್ನೂ ನೀಡಿದ್ದರಂತೆ. ಆದರೂ ಆತ ಇದೇ ಚಾಳಿ ಮುಂದುವರಿಸಿದ ಹಿನ್ನೆಲೆಯಲ್ಲಿ ಕರ್ತವ್ಯದಿಂದ ವಜಾಗೊಳಿಸಿ ಪ್ರಾಂಶುಪಾಲರು ಆದೇಶಿಸಿದ್ದಾರೆ.

Related Articles

Back to top button
error: Content is protected !!