ಶಿಕ್ಷಣ

ಮದರ್ ತೆರೆಸಾ ಶಿಕ್ಷಣ ಸಂಸ್ಥೆಯಲ್ಲಿ ಗಾಂಧಿ-ಶಾಸ್ತ್ರಿ ಜಯಂತಿ ಆಚರಣೆ

Views: 311

ಕನ್ನಡ ಕರಾವಳಿ ಸುದ್ದಿ: ಶಂಕರನಾರಾಯಣದ ಮದರ್ ತೆರೆಸಾ ಶಿಕ್ಷಣ ಸಂಸ್ಥೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಅಕ್ಟೋಬರ್ 2 ರಂದು ಗೌರವಪೂರ್ಣವಾಗಿ ಆಚರಿಸಲಾಯಿತು.

ಈ ಸ್ಮರಣೋತ್ಸವದಲ್ಲಿ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು , ಮುಖ್ಯೋಪಾಧ್ಯಾಯರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ, ಸ್ಕೌಟ್ ಮತ್ತು ಗೈಡ್ ತಂಡ ಹಾಗೂ ವಿದ್ಯಾರ್ಥಿಗಳು ಉತ್ಸಾಹಭರಿತವಾಗಿ ಪಾಲ್ಗೊಂಡರು.

ಕಾರ್ಯಕ್ರಮವು ದೀಪ ಪ್ರಜ್ವಲನೆಯಿಂದ ಆರಂಭವಾಗಿ ಸಾಂಘಿಕ ಸರ್ವ ಧರ್ಮ ಪ್ರಾರ್ಥನೆಯ ಮೂಲಕ ಶಾಂತಿ ಮತ್ತು ಏಕತೆಯ ಸಂದೇಶವನ್ನು ಸಾರಿತು. ಬಳಿಕ ಗಾಂಧೀಜಿ ಮತ್ತು ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ, ಅವರ ತ್ಯಾಗ, ಆದರ್ಶಗಳು ಮತ್ತು ಜೀವನ ಮೌಲ್ಯಗಳಿಗೆ ನಮನ ಸಲ್ಲಿಸಲಾಯಿತು.

ಸಮಾಜ ವಿಜ್ಞಾನ ಸಹಶಿಕ್ಷಕರಾದ ಶ್ರೀಯುತ ಉಮೇಶ್ ಪೂಜಾರಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಗಾಂಧೀಜಿಯ ಅಹಿಂಸಾ ತತ್ವ, ಸತ್ಯನಿಷ್ಠೆ ಹಾಗೂ ಸಮಾಜ ಸುಧಾರಣಾ ಕಾರ್ಯಗಳ ಕುರಿತು ತಿಳಿಸಿದರು. ಅಂತಿಮವಾಗಿ ರಾಷ್ಟ್ರಗೀತೆ ಹಾಡಿ ದೇಶಪ್ರೇಮದ ಭಾವನೆಗಳನ್ನು ಹಂಚಿಕೊಂಡು ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಯಿತು.ತರುವಾಯದಲ್ಲಿ ವಿದ್ಯಾರ್ಥಿಗಳಿಂದ ಶ್ರಮದಾನ ಕಾರ್ಯಕ್ರಮ ನಡೆಯಿತು. ಈ ಸಂಭ್ರಮವು ವಿದ್ಯಾರ್ಥಿಗಳಲ್ಲಿ ಶಿಸ್ತು, ರಾಷ್ಟ್ರಪ್ರೇಮ ಹಾಗೂ ಮೌಲ್ಯಪೂರ್ಣ ಜೀವನದ ಅರಿವು ಮೂಡಿಸಿತು.

Related Articles

Back to top button
error: Content is protected !!