ಶಿಕ್ಷಣ

ಮದರ್ ತೆರೆಸಾ ಪದವಿಪೂರ್ವ ಕಾಲೇಜಿನಲ್ಲಿ “ಜನರಲ್ ಕ್ವಿಜ್- 2025 ” ವಿದ್ಯಾರ್ಥಿಗಳಲ್ಲಿನ ಸಾಮಾನ್ಯ ಜ್ಞಾನದ ಪ್ರತಿಭಾ ಅನಾವರಣ 

Views: 314

ಕನ್ನಡ ಕರಾವಳಿ ಸುದ್ದಿ: ಶಂಕರನಾರಾಯಣದ ಮದರ್ ತೆರೆಸಾ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ” ‘ಜನರಲ್ ಕ್ವಿಜ್- 2025 ‘ ಸಾಮಾನ್ಯ ಜ್ಞಾನ ರಸಪ್ರಶ್ನೆ ಕಾರ್ಯಕ್ರಮವನ್ನು ದಿನಾಂಕ 13-09-2025ರಂದು ನಡೆಸಲಾಯಿತು.

ಪ್ರಾರಂಭಿಕ ಸುತ್ತಿನಲ್ಲಿ ಆಯ್ಕೆಯಾದ ನಾಲ್ಕು ವಿದ್ಯಾರ್ಥಿಗಳ ನಡುವೆ ಕೊನೆಯ ಸುತ್ತಿನ ಸ್ಫರ್ಧೆಯನ್ನು ನಡೆಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಹೊಂದಿರಬೇಕಾದ ಸಾಮಾನ್ಯ ಜ್ಞಾನದ ಬಗ್ಗೆ ಪರೀಕ್ಷಿಸಿ, ಸ್ಪರ್ಧಾಳುಗಳಿಗೆ ಹಾಗೂ ನೆರೆದಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಜ್ಞಾನಭಿವೃದ್ಧಿ ಮಾಡುವ ಗುರಿಯನ್ನು ಇರಿಸಿ ಈ ಸ್ಫರ್ಧೆಯನ್ನು ನಡೆಸಲಾಯಿತು.

ಹಲವಾರು ಸುತ್ತುಗಳನ್ನೊಳಗೊಂಡ ಈ ಸ್ಪರ್ಧೆಯಲ್ಲಿ ಪ್ರಮುಖ ಸ್ಥಳಗಳ ಗುರುತಿಸುವಿಕೆ, ವಿವಿಧ ಉತ್ಪನ್ನಗಳ ಬ್ರ್ಯಾಂಡ್ ಲೋಗೋ ಹಾಗೂ ಟ್ಯಾಗ್ ಲೈನ್ ಗುರುತಿಸುವಿಕೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ವರ್ತಮಾನ ವಿಷಯಗಳು, ಭೂಗೋಳ, ವಾಣಿಜ್ಯ, ಸಿನೆಮಾ, ಸಂಗೀತ ಹೀಗೆ ಹಲವು ವಿಭಾಗಗಳ ಪ್ರಶ್ನೆಗಳನ್ನು ಕೇಳಲಾಯಿತು. ಇದು ಸ್ಪರ್ದಾಳುಗಳಷ್ಟೇ ಅಲ್ಲ ನೆರೆದಿರುವ ವಿದ್ಯಾರ್ಥಿಗಳಲ್ಲಿ ಕುತೂಹಲ ಹಾಗೂ ಜ್ಞಾನಸಕ್ತಿ ಹುಟ್ಟಿಸಿತು.

ಕೊನೆಯಲ್ಲಿ ಪವನ್ ಕುಮಾರ್ ದ್ವಿತೀಯ ಪಿಯುಸಿ ಪ್ರಥಮ ಸ್ಥಾನ, ಪ್ರಮಿತ್ ಶೆಟ್ಟಿ ಪ್ರಥಮ ಪಿಯುಸಿ ದ್ವಿತೀಯ ಸ್ಥಾನ ಹಾಗೂ ತೃತೀಯ ಸ್ಥಾನವನ್ನು ದ್ವಿತೀಯ ಪಿಯುಸಿ ಅಭಿನಂದ ಶೆಟ್ಟಿ ಪಡೆದುಕೊಂಡರು.

ಪ್ರತೀ ಶೈಕ್ಷಣಿಕ ವರ್ಷದಲ್ಲಿ, ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ ಹಾಗೂ ಅವಶ್ಯಕ ಕೌಶಲಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದೊಂದಿಗೆ ಸಂಸ್ಥೆಯು ಕೈಗೊಳ್ಳುವ ಹಲವು ಸ್ಪರ್ಧೆಗಳಲ್ಲಿ, ಈ ರಸಪ್ರಶ್ನೆ ಸ್ಪರ್ಧೆಯು ವಿದ್ಯಾರ್ಥಿಗಳ ಜ್ಞಾನವರ್ಧನೆಗೆ ಸಹಕಾರಿಯಾಯಿತು.

ಸಂಸ್ಥೆಯ ಭಾಷಾ ಮತ್ತು ಸಾಂಸ್ಕೃತಿಕ ನಿರ್ದೇಶಕಿರಯಾದ ಕುಮಾರಿ ಅಲಿಟಾ ಡೇಸಾ ಈ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

Related Articles

Back to top button