ಐಟಿ ಚಾಂಪ್ -2025: ಮದರ್ ತೆರಸಾ ಪದವಿಪೂರ್ವ ಕಾಲೇಜಿನಲ್ಲಿ ತಾಂತ್ರಿಕ ಪ್ರತಿಭೆಯ ಉತ್ತೇಜನ ಕಾರ್ಯಕ್ರಮ

Views: 55
ಕನ್ನಡ ಕರಾವಳಿ ಸುದ್ದಿ: ಶಂಕರನಾರಾಯಣ ಮದರ್ ತೆರೇಸಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಐಟಿ ಚಾಂಪ್ ಸ್ಪರ್ಧೆ ನಡೆಸಲಾಯಿತು. ಇದು ವಿದ್ಯಾರ್ಥಿಗಳ ತಂತ್ರಜ್ಞಾನ ಕೌಶಲ್ಯಗಳನ್ನು ಪರೀಕ್ಷಿಸುವ ಉದ್ದೇಶ ಹೊಂದಿತ್ತು. ಸ್ಪರ್ಧೆಯ ಆರಂಭದಲ್ಲಿ ಪ್ರಾಥಮಿಕ ಸುತ್ತನ್ನು ನಡೆಸಿ ಅದರಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ನಾಲ್ವರು ವಿದ್ಯಾರ್ಥಿಗಳು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು. ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ : “ಕೀಯನ್ನು ಹುಡುಕಿ”, “ಹಾರ್ಡ್‌ವೇರ್ ಹಂಟ್”, ” ವಿಸ್ತರಿಸಿ”, ” ಗುರುತಿಸಿ” ಮತ್ತು “ಔಟ್‌ಪುಟ್ ಹುಡುಕಿ” ಎಂಬ ವಿಶಿಷ್ಟವಾದ ಐದು ಸುತ್ತುಗಳ ಮೂಲಕ ವಿದ್ಯಾರ್ಥಿಗಳ ಬುದ್ಧಿವಂತಿಕೆಯನ್ನು ಕೌಶಲವನ್ನು ಪರೀಕ್ಷಿಸಲಾಯಿತು.
ಸ್ಪರ್ಧೆಯಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗ ಆದಿತ್ಯ ಪ್ರಥಮ ಸ್ಥಾನ, ದ್ವಿತೀಯ ಸ್ಥಾನವನ್ನು ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ನಿಯತ್ ಮತ್ತು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಸೃಜನ್ ಹಂಚಿಕೊಂಡರು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಅಕ್ಷಯ್ ಕುಲಾಲ್ ಮೂರನೇ ಸ್ಥಾನ ಪಡೆದರು.
ಈ ಸ್ಪರ್ಧೆ ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಜ್ಞಾನವನ್ನು ಬೆಳೆಸಲು ಸಹಾಯ ಮಾಡುವುದು ಮಾತ್ರವಲ್ಲದೇ ಡಿಜಿಟಲ್ ಯುಗಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ಆಗಿತ್ತು.
ಈ ಸ್ಪರ್ಧೆಯನ್ನು ಗಣಕ ಶಾಸ್ತ್ರ ಉಪನ್ಯಾಸಕರಾದ ಸುಮಾ ಅಮೀನ್ ಮತ್ತು ಸಮರ್ಥ್ ಅತ್ಯುತ್ತಮವಾಗಿ ನಡೆಸಿಕೊಟ್ಟರು.