ನಾಳೆ ಗೋಚರಿಸಲಿದೆ ಸಂಪೂರ್ಣ ಚಂದ್ರಗ್ರಹಣ-ಎಷ್ಟು ಗಂಟೆಯಿಂದ ಎಷ್ಟರವರೆಗೆ?.. ಜ್ಯೋತಿಷ್ಯರು ಹೇಳುವುದೇನು?

Views: 231
ಕನ್ನಡ ಕರಾವಳಿ ಸುದ್ದಿ:ಭಾರತದಾದ್ಯಂತ ನಾಳೆ ಭಾನುವಾರ ಚಂದ್ರಗ್ರಹಣ ಸಂಭವಿಸಲಿದ್ದು ರಾತ್ರಿ 9.57ರಿಂದ ಗ್ರಹಣ ಪ್ರಕ್ರಿಯೆ ಆರಂಭವಾಗಲಿದೆ. 11.01ರಿಂದ 12.23ರ ಅವಧಿಯಲ್ಲಿ ಸಂಪೂರ್ಣ ಚಂದ್ರಗ್ರಹಣ ಸಂಭವಿಸಲಿದ್ದು, ಸೋಮವಾರ ಮುಂಜಾನೆ 2.25ಕ್ಕೆ ಅಂತ್ಯಗೊಳ್ಳುತ್ತದೆ. ಗ್ರಹಣದ ಸಮಯ ತಡರಾತ್ರಿವರೆಗೂ ಈ ಪ್ರಕ್ರಿಯೆಯನ್ನು ಬರಿಗಣ್ಣಿನಿಂದ ವೀಕ್ಷಿಸಬಹುದು ಎಂದು ತಿಳಿದುಬಂದಿದೆ.
ಭಾರತದಲ್ಲಿ ಕಾಣಸಿಗುವ ಈ ಚಂದ್ರಗ್ರಹಣದ ಅವಧಿಯು ಸುಮಾರು 82 ನಿಮಿಷಗಳಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈ ಸಂಪೂರ್ಣ ಚಂದ್ರಗ್ರಹಣವನ್ನು ದಶಕದ ಅತೀ ದೊಡ್ಡ ಗ್ರಹಣ ಎಂದು ಬಿಂಬಿಸಲಾಗಿದೆ.ಮುಂದಿನ ಸಂಪೂರ್ಣ ಚಂದ್ರಗ್ರಹಣವು 2028ರ ಡಿ.31ರಂದು ನಡೆಯಲಿದೆ’
ಇನ್ನು ಗ್ರಹಣದ ಪ್ರಯುಕ್ತ ಕರಾವಳಿಯ ಕೆಲವು ದೇವಸ್ಥಾನಗಳಲ್ಲಿ ಅನ್ನಸಂತರ್ಪಣೆ ಸಮಯದಲ್ಲಿ ಬದಲಾವಣೆಗಳಾಗಿವೆ. ಬೆಳಿಗ್ಗೆ 10:30ಕ್ಕೆ ಭೋಜನ ವ್ಯವಸ್ಥೆ ಆರಂಭವಾಗಲಿದ್ದು ಊಟ 12 ಗಂಟೆಗೆ ಮುಕ್ತಾಯಗೊಳ್ಳಲಿದೆ.
ರಾತ್ರಿ 9.57ಕ್ಕೆ ಗ್ರಹಣ ಸ್ಪರ್ಶಕಾಲ ಇರೋದ್ರಿಂದ ಮಧ್ಯಾಹ್ನ 1 ಗಂಟೆಯೊಳಗೆ ಊಟ ಮಾಡಿಕೊಂಡಿದ್ರೆ ಒಳ್ಳೆಯದು ಎಂದು ಜ್ಯೋತಿಷಿಗಳು ಹೇಳುತ್ತಾರೆ.