ಮದರ್ ತೆರೆಸಾ ವಿದ್ಯಾರ್ಥಿಗಳಿಂದ ಮಾನವೀಯತೆಯ ಮಹತ್ವ ಹಾಗೂ ಸಮಾನತೆಯ ಸಂದೇಶ ಸಾರುವ ಸಾಂಸ್ಕೃತಿಕ ಕಾರ್ಯಕ್ರಮ

Views: 202
ಕನ್ನಡ ಕರಾವಳಿ ಸುದ್ದಿ: ಮಾನವತೆ, ಪ್ರೀತಿ ಮತ್ತು ಸೇವೆಯ ಪ್ರತೀಕವಾಗಿದ್ದ ಮದರ್ ತೆರೆಸಾ ಅವರ ಆದರ್ಶ ಮತ್ತು ಜೀವನ ಮೌಲ್ಯಗಳನ್ನು ಇಟ್ಟುಕೊಂಡು ಸ್ಥಾಪಿತವಾದ ಮದರ್ ತೆರೆಸಾ ಶಿಕ್ಷಣ ಸಂಸ್ಥೆಯು ತಮ್ಮ ಸಂಸ್ಥೆಯ ಪೇಟ್ರೋನ್ ಆಗಿರುವ ಮದರ್ ತೆರೆಸಾ ಅವರ ಜನ್ಮದಿನವನ್ನು ‘ಪೆಟ್ರೋನಸ್ ಡೇ’ ಎಂದು ಅಗಸ್ಟ್ 26 ರಂದು ಅದ್ಧೂರಿಯಾಗಿ ಆಚರಿಸಿಕೊಳ್ಳಲಾಯಿತು.
ಈ ಸಂಭ್ರಮದ ಕಾರ್ಯಕ್ರಮವನ್ನು ಅಗಸ್ಟ್ 20 ರಂದು ಮದರ್ ತೆರೆಸರ ಭಾವಚಿತ್ರವನ್ನು ಅನಾವರಣಗೊಳಿಸುವ ಮೂಲಕ ಚಾಲನೆ ನೀಡಲಾಯಿತು. ಅಗಸ್ಟ್ 20ರಿಂದ 26 ರರ ಸಪ್ತಾಹದಲ್ಲಿ ಎಲ್ಲ ವಿಭಾಗದ ವಿದ್ಯಾರ್ಥಿ ಗಳಿಗೆ ಚಿತ್ರಕಲೆ, ಭಾಷಣದಂತಹ ವಿಭಿನ್ನ ಸ್ಪರ್ಧೆಗಳು ನಡೆಯಿತು.
ಮದರ್ ತೆರೆಸಾರ ಜನ್ಮ ದಿನವಾದ ಅಗಸ್ಟ್ 26 ರಂದು, ವಿದ್ಯಾರ್ಥಿಗಳು ಮದರ್ ತೆರೆಸಾರ ಜೀವನ ಚರಿತ್ರೆಯನ್ನು ರೂಪಕದ ಮೂಲಕ ಅತ್ಯಂತ ಕಲಾತ್ಮಕವಾಗಿ ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಡಳಿತ ನಿರ್ದೇಶಕರಾದ ಕುಮಾರಿ ರೆನಿಟಾ ಲೋಬೊ ಮಾತನಾಡುತ್ತಾ, “ಮದರ್ ತೆರೆಸಾ ರ ಜೀವನ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು”ಎಂದರು.
ಇನ್ನೋರ್ವ ಆಡಳಿತ ನಿರ್ದೇಶಕರಾದ ಕುಮಾರಿ ಶಮಿತಾ ರಾವ್ ಇವರು” ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಬಹುದು ಎಂಬ ತತ್ವವು ಎಲ್ಲರ ಜೀವನದ ದೀಪವಾಗಲಿ,” ಎಂದು ಹೇಳಿದರು.
ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗಾಗಿ ಮದರ್ ತೆರೆಸಾರ ಜೀವನ ಚರಿತ್ರೆ ಮತ್ತು ಸಂಸ್ಥೆಯ ಇತಿಹಾಸದ ಕುರಿತು ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಎಲ್ಲ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಫಲಕ ಪ್ರದಾನ ಮಾಡುವ ಮೂಲಕ ಅವರ ಪ್ರತಿಭೆಯನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಕೊನೆಗೆ ಮದರ್ ತೆರೆಸಾರ ಭಾವಚಿತ್ರವನ್ನು ಆಡಳಿತ ನಿರ್ದೇಶಕರಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮದ ಸಮಾರೋಪ ನಡೆಯಿತು. ಈ ವಿಶಿಷ್ಟ ಸಂಭ್ರಮದಲ್ಲಿ ಪ್ರಾಂಶುಪಾಲರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಚ್ಚುಕಟ್ಟಾದ ನಿರೂಪಣೆ ಮತ್ತು ನಿರ್ವಹಣೆಯನ್ನು ಭಾಷಾ ಮತ್ತು ಸಾಂಸ್ಕೃತಿಕ ನಿರ್ದೇಶಕಿ ಕುಮಾರಿ ಅಲಿಟಾ ಡೇಸ ನಡೆಸಿಕೊಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.