ಜನಮನ

ನೀಲಿ ಮೊಟ್ಟೆ ಇಟ್ಟು ಅಚ್ಚರಿ ಮೂಡಿಸಿದ ನಾಟಿಕೋಳಿ!!

Views: 68

ಕನ್ನಡ ಕರಾವಳಿ ಸುದ್ದಿ: ನೀಲಿ ಬಣ್ಣದ ಮೊಟ್ಟೆ ಇಟ್ಟು ನಾಟಿಕೋಳಿಯೊಂದು ಅಚ್ಚರಿ ಮೂಡಿಸಿದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ನಡೆದಿದೆ.

ನಲ್ಲೂರ ಗ್ರಾಮದ ಸೈಯದ್ ನೂರ್ ಎಂಬುವವರಿಗೆ ಸೇರಿದ ನಾಟಿ ಕೋಳಿ ಇದಾಗಿದ್ದು, ಜೀವನಕ್ಕಾಗಿ ಸೈಯದ್‌ ನೂರ್‌ ನಾಟಿ ಕೋಳಿ ಸಾಕಿದ್ದರು. ಪ್ರತಿದಿನ ಬಿಳಿ ಮೊಟ್ಟೆಯನ್ನೇ ಇಡುತ್ತಿತ್ತು. ಆದರೆ, ಸೋಮವಾರ ಅಚ್ಚರಿ ಎಂಬಂತೆ ಈ ಕೋಳಿಯೂ ನೀಲಿ ಮೊಟ್ಟೆಯೊಂದನ್ನು ಇಟ್ಟಿದೆ. ನೀಲಿ ಬಣ್ಣದ ಮೊಟ್ಟೆ ಇಟ್ಟಿದ್ದಕ್ಕೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಗೂ ಸಹ ಅಚ್ಚರಿ ಉಂಟುಮಾಡಿದೆ.

ಈ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಚನ್ನಗಿರಿ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಅಶೋಕ, ಮೆದೊಜೀರಕಾಂಗದಲ್ಲಿ ಬಿಲಿವರ್ಡಿನ್ ಎಂಬ ವರ್ಣ ದ್ರವ್ಯದ ಕಾರಣಕ್ಕೆ ನೀಲಿ ಬಣ್ಣ ಬಂದಿರುವ ಸಾದ್ಯತೆ ಇದೆ. ಈ ರೀತಿ ಯಾವಗಲೂ ಒಮ್ಮೆ ಆಗುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದೇ ರೀತಿ ನಿರಂತರವಾಗಿ ನೀಲಿ ಮೊಟ್ಟೆ ಇಟ್ಟರೆ ವೈಜ್ಞಾನಿಕವಾಗಿ ಪರಿಶೀಲಿಸಬೇಕಿದೆ ಎಂದು ತಿಳಿಸಿದ್ದಾರೆ.

Related Articles

Back to top button