ಇತರೆ

ಆಲೂರಿನಲ್ಲಿ 6 ದಿನಗಳ ವಿವಿಧ ಮಸಾಲಾ ಪದಾರ್ಥಗಳ ತರಬೇತಿಯ ಉದ್ಘಾಟನೆ

Views: 72

ಕನ್ನಡ ಕರಾವಳಿ ಸುದ್ದಿ:ವಿಜಯ ಗ್ರಾಮೀಣ ಪ್ರತಿಷ್ಠಾನ ಮತ್ತು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಗ್ರಾಮ ಪಂಚಾಯತ್ ಆಲೂರು ಭುವನೇಶ್ವರಿ ಸಂಜೀವಿನಿ ಒಕ್ಕೂಟ ಇವರ ಆಯೋಜನೆಯಲ್ಲಿ ವಿಶ್ವಕರ್ಮ ಸಭಾಂಗಣ ಕಾಳಿಕಾಂಬಾ ನಗರ ಆಲೂರಿನಲ್ಲಿ 6 ದಿನಗಳ ವಿವಿಧ ಮಸಾಲಾ ಪದಾರ್ಥಗಳ ತರಬೇತಿಯ ಉದ್ಘಾಟನೆ ವಿಶ್ವಕರ್ಮ ಸಮುದಾಯ ಭವನ ಕಾಳಿಕಾಂಬಾ ನಗರ ಆಲೂರಿನಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ವಿಜಯ ಗ್ರಾಮೀಣ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್ ಅವರು ಗಿಡಕ್ಕೆ ನಿರೂಣಿಸುವ ಮೂಲಕ ಉದ್ಘಾಟಿಸಿ, ಶುಭಹಾರೈಸಿದರು.

ಆಲೂರು ಗ್ರಾಮ ಪಂಚಾಯತ್ ಅಧ್ಯಕ್ಷರು ರಾಜೇಶ್ ದೇವಾಡಿಗ, ಪಿಡಿಓ ರೂಪಾ ಗೋಪಿ, ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಜಯಶ್ರೀ, ತರಬೇತುದಾರರಾದ ಹೇಮಾ ಜಗನ್ನಾಥ, ಬಿವಿಟಿಯ ರಾಘವೇಂದ್ರ ಆಚಾರ್ಯ, ವಿಶ್ವಕರ್ಮ ಸಮುದಾಯ ಭವನದ ಅಧ್ಯಕ್ಷರು ಶ್ರೀಧರ ಆಚಾರ್ ಉಪಸ್ಥಿತರಿದ್ದು ಶುಭಹಾರೈಸಿದರು.

ಶರಾವತಿ, ಪ್ರೀತಿ, ಸುಮಿತ್ರಾ ಪ್ರಾರ್ಥಿಸಿ, ಚೈತ್ರ ಸ್ವಾಗತಿಸಿ, ದಿವ್ಯ ವಂದಿಸಿ, ವೀಣಾ ಆಚಾರ್ಯ ನಿರೂಪಿಸಿದರು.ಒಟ್ಟು 36 ಜನ ಸಂಜೀವಿನಿ ಸ್ವ ಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು. ವಿಜಯ ಪ್ರತಿಷ್ಠಾನದ ಸಿಬ್ಬಂದಿ ಪಂಡರಿನಾಥ್, ಎಂಬಿಕೆ ರಶ್ಮಿತ, ಎಲ್ ಸಿ ಆರ್ ಪಿ ಸಹಕರಿಸಿದರು.

Related Articles

Back to top button