ಆರೋಗ್ಯ

ಅಪ್ರಾಪ್ತೆ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ:ಯೋಗ ಗುರು ಬಂಧನ

Views: 95

ಕನ್ನಡ ಕರಾವಳಿ ಸುದ್ದಿ: ಯೋಗ ಕಲಿಯಲು ಯೋಗ ಸೆಂಟರ್‌ಗೆ ಬರುತ್ತಿದ್ದ ಬಾಲಕಿ, ಯುವತಿಯರು ಸೇರಿದಂತೆ ಎಂಟು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಯೋಗ ಗುರು ನಿರಂಜನಾ ಮೂರ್ತಿಯನ್ನು ರಾಜರಾಜೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.

ಹದಿನೇಳು ವರ್ಷದ ಬಾಲಕಿ ದೂರಿನ ಅನ್ವಯ ಪೋಕ್ಸೋ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಿ ಕಾಮುಕ ಯೋಗ ಗುರು ನಿರಂಜನಾ ಮೂರ್ತಿಯನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ಬಂಧಿತ ಆರೋಪಿಯು ಯೋಗ ಸ್ಪರ್ಧೆ ಟ್ರೋಪಿ ಕೊಡಿಸುವುದು,ಉದ್ಯೋಗ ಕೊಡಿಸುವ ಅಮಿಷವೊಡ್ಡಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ ಎಂದರು.

ಆರೋಪಿ ಯೋಗ ಗುರು ನಿರಂಜನಾ ಮೂರ್ತಿ ರಾಜರಾಜೇಶ್ವರಿ ನಗರದಲ್ಲಿ ಸನ್ ಶೈನ್ ಇನ್ಸ್ಟಿಟ್ಯೂಟ್ ಯೋಗ ಕೇಂದ್ರ ನಡೆಸುತ್ತಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗದಲ್ಲಿ ಹೆಸರು ಬರುವಂತೆ ಮಾಡುತ್ತೇನೆ,ಆದರಿಂದ ಸರ್ಕಾರಿ ಕೆಲಸವು ಸಿಗಬಹುದು ಎಂದು ನಂಬಿಸಿ, ಯೋಗ ಸೆಂಟರ್‌ಗೆ ಬರುತ್ತಿದ್ದ ಯುವತಿಯರು ಸೇರಿದಂತೆ ಸುಮಾರು ಏಳೆಂಟು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವ ಮಾಹಿತಿಯಿದ್ದು ಹೆಚ್ಚಿನ ತನಿಖೆಯನ್ನು ನಡೆಸಲಾಗಿದೆ.

ಅಪ್ರಾಪ್ತ 17 ವರ್ಷದ ಬಾಲಕಿಗೆ 2019 ರಿಂದ ಆರೋಪಿ ನಿರಂಜನ್ ಮೂರ್ತಿ ಪರಿಚಯವಿದ್ದು, 2021 ರಿಂದ ಯೋಗಾ ಸ್ಪರ್ಧೆಗೆ ಭಾಗವಹಿಸಲು ತಯಾರಿ ನಡೆಸಿದ್ದಳು,ಕಳೆದ 2023 ರಲ್ಲಿ ನಿರಂಜನ್ ಮೂರ್ತಿ ಜೊತೆ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಲು ಥಾಯ್ಲಂಡ್‌ಗೆ ಹೋಗಿದ್ದು, ಬಾಲಕಿಗೆ ಆರೋಪಿಗೆ ಲೈಂಗಿಕ ಕಿರುಕುಳ ನೀಡಿದ್ದರಿಂದ ಆಕೆ ಯೋಗಾ ಸ್ಪರ್ಧೆಯನ್ನು ಬಿಟ್ಟಿದ್ದರು.

ಬಳಿಕ 2024 ರಲ್ಲಿ ಬಾಲಕಿಯು ನಿರಂಜನ್ ಮೂರ್ತಿ ನಡೆಸುತ್ತಿದ್ದ ಯೋಗಾ ಸ್ಪರ್ಧೆಗೆ ಸನ್ ಶೈನ್ ಇನ್ಸ್ಟಿಟ್ಯೂಟ್ ಗೆ ಸೇರಿಕೊಂಡಿದ್ದು, ಮತ್ತೆ ಬಾಲಕಿ ಲೈಂಗಿಕ ಕಿರುಕುಳ ನೀಡಿದ್ದಾನೆ.

ನ್ಯಾಷನಲ್ ಯೋಗಾ ಸ್ಪರ್ಧೆಯಲ್ಲಿ ಮೆಡಲ್ ಕೊಡಿಸುತ್ತೇನೆ ಹಾಗೂ ಪ್ಲೇಸ್ ಮೆಂಟ್ ಕೊಡಿಸುತ್ತೇನೆಂದು ಆಮಿಷ ಒಡ್ಡಿ ಸನ್ ಶೈನ್ ಇನ್ಸ್ಟಿಟ್ಯೂಟ್ ನಲ್ಲಿ 2025 ರ ಆಗಸ್ಟ್ ನಲ್ಲಿ ದೈಹಿಕ ಸಂಪರ್ಕ ನಡೆಸಿ,ಮತ್ತೆ ರಾಜ್ಯ ಮಟ್ಟದಲ್ಲಿ ಪ್ಲೇಸ್ ಮೆಂಟ್ ಕೊಡಿಸುತ್ತೇನೆಂದು ದೈಹಿಕ ಸಂಪರ್ಕಕ್ಕೆ ಪ್ರಯತ್ನಿಸಿದ್ದು,ಈ ಸಂಬಂಧ ಸಂತ್ರಸ್ತ ಬಾಲಕಿ ನೀಡಿದ ದೂರು ಆಧರಿಸಿ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ.

 

Related Articles

Back to top button