ಇತರೆ

ಕರ್ತವ್ಯದ ಮೇಲೆ ತೆರಳಿದ ASI ಹೃದಯಾಘಾತದಿಂದ ಸಾವು

Views: 61

ಕನ್ನಡ ಕರಾವಳಿ ಸುದ್ದಿ: ಕರ್ತವ್ಯದ ಮೇಲೆ ರಾಜಸ್ಥಾನಕ್ಕೆ ತೆರಳಿದ್ದ ಹೊಸಪೇಟೆ ಠಾಣೆ ಎಎಸ್ ಐ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಹೊಸಪೇಟೆ ಗ್ರಾಮೀಣ ಠಾಣೆಯ ಎಎಸ್ ಐ ಹಾಲಪ್ಪ ಹೃದಯಾಘಾತಕ್ಕೆ ಬಲಿಯಾದವರು. ರಾಜಸ್ಥಾನದ ಜೋಧಪುರದಲ್ಲಿ ಮೃತಪಟ್ಟಿದ್ದಾರೆ.

ಕರ್ತವ್ಯದ ಮೇಲೆ ಹೊಸಪೇಟೆಯಿಂದ ರಾಜಸ್ಥಾನದ ಜೋಧಪುರಕ್ಕೆ ಎಎಸ್ ಐ ಹಾಲಪ್ಪ ಹಾಗೂ ಇಬ್ಬರು ಕಾನ್ಸ್ ಟೇಬಲ್ ಗಳು ತೆರಳಿದ್ದರು. ಈ ವೇಳೆ ಹಾಲಪ್ಪ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಮೃತ ಎಎಸ್ ಐ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಗ್ರಾಮದವರು ಎಂದು ತಿಳಿದುಬಂದಿದೆ.

Related Articles

Back to top button