ಇತರೆ

ಸರಣಿ ಅಪಘಾತ: ಗಾಯಾಳು ರಕ್ಷಿಸಲು ಬಂದ ಆಂಬುಲೆನ್ಸ್‌ಗೂ ಅಪಘಾತ: ಓರ್ವ ಸಾವು

Views: 11

ಕನ್ನಡ ಕರಾವಳಿ ಸುದ್ದಿ: ಹುಬ್ಬಳ್ಳಿ-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯ ಅನಗವಾಡಿ ಬ್ರಿಡ್ಜ್ ಬಳಿ ಸರಣಿ ಅಪಘಾತ ಸಂಭವಿಸಿದೆ‌.

ನಡೆದ ಘಟನೆಯೇ ಬೇರೆ ಆದರೆ ಅಲ್ಲಿ ಆಗಿದ್ದೇ ಬೇರೆ ಮೊದಲು ಸಾರಿಗೆ ಸಂಸ್ಥೆ ಬಸ್ಸಿಗೆ ಕ್ರೂಸರ್ ವಾಹನವೊಂದು ಡಿಕ್ಕಿ ಹೊಡೆದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲು ಸ್ಥಳಕ್ಕೆ ಬಂದ ಆಂಬುಲೆನ್ಸ್‌ಗೆ ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಓಮಿನಿ ಕಾರು ಡಿಕ್ಕಿ ಹೊಡೆದಿದೆ.

ಓಮಿನಿ ಕಾರು-ಆಂಬುಲೆನ್ಸ್ ಎರಡೂ ಪಲ್ಟಿ ಆಗಿವೆ‌. ಪಲ್ಟಿಯಾದ ಓಮಿನಿ ಕಾರು ಅಲ್ಲೇ ಎಮ್ಮೆ ಮೇಯಿಸುತ್ತಿದ್ದ ವ್ಯಕ್ತಿಗೆ ರಭಸದಿಂದ ಡಿಕ್ಕಿ ಹೊಡೆದಿದೆ. ಎಮ್ಮೆ ಮೇಯಿಸುತ್ತಿದ್ದ ಚಿತ್ತಪ್ಪ ನೀಲಣ್ಣವರ ಆಸ್ಪತ್ರೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾನೆ.

Related Articles

Back to top button