ಇತರೆ
ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ: ಕೊನೆ ಕ್ಷಣದಲ್ಲಿ ಮನಸ್ಸು ಬದಲಿಸಿ ಮರದ ಕೊಂಬೆಯನ್ನು ಹಿಡಿದು ಸಾವಿನಿಂದ ಪಾರಾದ ಮಾಜಿ ಸೈನಿಕ

Views: 104
ಕನ್ನಡ ಕರಾವಳಿ ಸುದ್ದಿ: ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನದಿಗೆ ಹಾರಿದ್ದ ಮಾಜಿ ಸೈನಿಕನಿಕ ಕೊನೆ ಕ್ಷಣದಲ್ಲಿ ಬದುಕಬೇಕೆಂದು ಆಸೆ ಹುಟ್ಟಿದ್ದು, ಸಾವಿನ ದವಡೆಯಿಂದ ಪಾರಾಗಿ ಬಂದಿದ್ದಾರೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಮಾಜಿ ಸೈನಿಕ ಬೃಂಗೇಶ್ ಸಾಲಬಾಧೆ ತಾಳಲಾರದೆ ಸತ್ತೇಗಾಲ ಬಳಿ ಕಾವೇರಿ ನದಿಗೆ ಹಾರಿದ್ದರು.
ನದಿಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದರಿಂದ ಮಾಜಿ ಸೈನಿಕ ಬೃಂಗೇಶ್ ಕೊಚ್ಚಿಕೊಂಡು ಹೋಗುತ್ತಿದ್ದರು. ಕೊನೆ ಕ್ಷಣದಲ್ಲಿ ಮನಸು ಬದಲಿಸಿ, ಬದುಕಬೇಕೆಂದು ಆಸೆ ಹುಟ್ಟಿದೆ. ಕೂಡಲೇ, ಮಾಜಿ ಸೈನಿಕ ಬೃಂಗೇಶ್ ಸನೀಹದಲ್ಲೇ ಇದ್ದ ಮರದ ಕೊಂಬೆಯನ್ನು ಹಿಡಿದುಕೊಂಡಿದ್ದಾರೆ. ಬಳಿಕ, ಮಾಜಿ ಸೈನಿಕ ಬೃಂಗೇಶ್ ರಕ್ಷಣೆ ಮಾಡುವಂತೆ ಕಿರುಚಾಡಿದ್ದಾರೆ. ಆಗ, ಅಂಬಿಗರು ಮಾಜಿ ಸೈನಿಕ ಬೃಂಗೇಶ್ನನ್ನು ರಕ್ಷಣೆ ಮಾಡಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.