ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುದ್ಧುರಾಧ- ಮುದ್ದುಕೃಷ್ಣ ಸ್ಪರ್ಧೆ

Views: 88
ಕನ್ನಡ ಕರಾವಳಿ ಸುದ್ದಿ:ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾವ ಗರ್ಭಿತವಾಗಿ ಮುದ್ಧುರಾಧ- ಮುದ್ದುಕೃಷ್ಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು.
ಮುದ್ದಾದ ರಾಧೆ ಮತ್ತು ಕೃಷ್ಣರ ಬಾಲ ಲೀಲೆಗಳು ಮಕ್ಕಳ ಮನಸ್ಸಿನಲ್ಲಿ ಭಕ್ತಿ ಮತ್ತು ಪ್ರೀತಿಯ ಬೀಜ ಬಿತ್ತುತ್ತವೆ. ಸಂಸ್ಕೃತಿ ಸಂಪ್ರದಾಯ ಮತ್ತು ಮೌಲ್ಯಗಳ ಕಿರಣವಾಗಿ ಬೆಳಕು ಹರಡುತ್ತವೆ.
ಕಾರ್ಯಕ್ರಮದ ಮೊದಲು ವಿದ್ಯಾರ್ಥಿಗಳು ಹುಲಿವೇಷ ನತ್ಯವನ್ನು ಮನಮೋಹಕವಾಗಿ ಪ್ರದರ್ಶಿಸಿದರು.
ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಮುಖ್ಯ ಅತಿಥಿಗಳಾಗಿ ಹಾಗೂ ತೀರ್ಪುಗಾರರಾಗಿ ಸುಶ್ಮಿತಾ ಸಾಲಿಗ್ರಾಮ ಮತ್ತು ವಿದುಷಿ ಸುಫಾಲಿತ ರವರು ಆಗಮಿಸಿದ್ದರು. ಪುಟಾಣಿಗಳು ರಾಧಾ-ಕೃಷ್ಣನ ವೇಷಧರಿಸಿ ಗಾನಗಳ ಮೂಲಕ ಬಾಲಲೀಲೆಗಳನ್ನು ಅದ್ಭುತವಾಗಿ ವ್ಯಕ್ತಪಡಿಸಿದರು.
ರಂಗ ಮಂಚದ ಅಲಂಕಾರ ಮಕ್ಕಳ ವೇಷ ಭೂಷಣ ಮತ್ತು ಮನ ಕಲಕುವ ಅಭಿನಯ ಎಲ್ಲರ ಮನ ಗೆದ್ದಿತ್ತು .
ಪ್ರಥಮ ಬಹುಮಾನವನ್ನು ವೈ ಆರಾಧ್ಯ ಭಟ್,ದ್ವಿತೀಯ ಬಹುಮಾನವನ್ನು ಶ್ರೀಯಾ ಕೆ ಕಾಂಚನ್ ಸಮಾಧಾನಕರ ಬಹುಮಾನವನ್ನು ಅನ್ವಿ ಎಸ್ ನಾಯಕ್, ಶ್ರೀದ್ಧಾ ಕೆ.ಕಾಂಚನ್,ಅನ್ವಿಕ್,ವಿಹಲ್ಯಾ ವಿ ಕಾರ್ವಿ,ಅಹನಾ ಪುರಾಣಿಕ .ಹಾಗೂ ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೂ ಪ್ರಶಸ್ತಿ ಪತ್ರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಶ್ರೀ ಸಂತೋಷ್ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ದೇಶಿಸಿ “ಶ್ರೀ ಕೃಷ್ಣನ ಜನನ ಜೈಲಿನಲ್ಲಿ ,ಅಂತ್ಯ ಅರಮನೆಯಲ್ಲಿ ಆದರೆ ಮನುಷ್ಯನ ಜನನ ಅರಮನೆಯಲ್ಲಿ ,ಅಂತ್ಯ ಜೈಲಿನಲ್ಲಾಗುತ್ತಿದೆ”.ಎಂತಹ ವಿಪರ್ಯಾಸ. ನಾವು ಎಳವಿನಲ್ಲಿಯೇ ಮಕ್ಕಳಿಗೆ ದೈವಿಗುಣ, ದೇವರ ಭಕ್ತಿ ಅಳವಡಿಸಿಕೊಳ್ಳುವಂತೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಆಡಳಿತ ಅಧಿಕಾರಿಯದ ಶ್ರೀಮತಿ ಆಶಾ ಶೆಟ್ಟಿ , ಪ್ರಾಂಶುಪಾಲರಾದ ರೇಷ್ಮಾ ಅಡಪ ಹಾಗೂ ಶಿಕ್ಷಕ/ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಸಹ ಶಿಕ್ಷಕಿಯರಾದ ಪ್ರಿಯ ಮತ್ತು ಶ್ವೇತ ಕಾರ್ಯಕ್ರಮವನ್ನು ಸಂಪೂರ್ಣವಾಗಿ ನಿರೂಪಿಸಿದರು.