ಇತರೆ
ಕುಂದಾಪುರ: ಮೀನು ಹಿಡಿಯಲೆಂದು ಹೋದ ವ್ಯಕ್ತಿ ಕಟ್ಬೆಲ್ತೂರಿನ ಸಿಗಡಿ ಕೆರೆಗೆ ಬಿದ್ದು ಸಾವು

Views: 113
ಕನ್ನಡ ಕರಾವಳಿ ಸುದ್ದಿ: ಮೀನು ಹಿಡಿಯಲೆಂದು ಹೋದ ವ್ಯಕ್ತಿ ಕುಂದಾಪುರ ತಾಲೂಕಿನ ಹೆಮ್ಮಾಡಿಯ ಕಟ್ಬೆಲ್ತೂರಿನಲ್ಲಿ ಸಿಗಡಿ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ಕಟ್ಬೆಲ್ತೂರು ಗ್ರಾಮದ ನಿವಾಸಿ ನಾಗರಾಜ (48) ಮೀನು ಹಿಡಿಯಲು ಬಲೆ ಹಿಡಿದುಕೊಂಡು ಆಗಸ್ಟ್ 12ರ ಬೆಳಗ್ಗೆ ಮನೆಯಿಂದ ಹೊರಟಿದ್ದರು. ಮಧ್ಯಾಹ್ನ ಊಟಕ್ಕೂ ಬಂದಿರಲಿಲ್ಲ. ಸಂಜೆಯಾದರೂ ವಾಪಸು ಬಾರದ ಕಾರಣ ಮನೆಯವರು ಹೊಳೆ ಕಡೆಗೆ ಹೋಗಿ ನೋಡಿದಾಗ ಎಲ್ಲಿಯೂ ಕಾಣಲಿಲ್ಲ. ಆಗಸ್ಟ್ 13ರ ಬೆಳಿಗ್ಗೆ ಮತ್ತೆ ಹುಡುಕಾಟ ನಡೆಸಿದಾಗ ನಾಗರಾಜ ಅವರ ಮೃತದೇಹ ಕಟ್ಬೆಲ್ತೂರು ಗ್ರಾಮದ ಕೆರೆಯಲ್ಲಿ ತೇಲುತ್ತಿರುವುದು ಕಂಡು ಬಂದಿದೆ. ಸಹೋದರ ಉಮೇಶ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






