ಜನಮನ

ವಕ್ವಾಡಿ: ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ

ವಕ್ವಾಡಿ ದ್ಯಾಗಳಮನೆ ದಿ.ಮಂಜಮ್ಮ ಶೆಡ್ತಿ ಅವರ ಸ್ಮರಣಾರ್ಥ ಅವರ ಪುತ್ರ ಡಾ.ಚಂದ್ರಶೇಖರ್ ಶೆಟ್ಟಿ ಇವರಿಂದ ಸಹಾಯಧನ  

Views: 0

ಕುಂದಾಪುರ : ಡಾ. ಚಂದ್ರಶೇಖರ್ ಶೆಟ್ಟಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹೊನ್ನಾವರ ಇವರು ತಮ್ಮ ತಾಯಿಯ ಪ್ರಥಮ ಪುಣ್ಯತಿಥಿ ದಿನದಂದು ವಕ್ವಾಡಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ 14 ಬಡ ಕುಟುಂಬದ ವಿದ್ಯಾರ್ಥಿಗಳಿಗೆ ತಲಾ 4000/= ( ಒಟ್ಟು 56000.ರೂ ) ಸಹಾಯ ಧನವನ್ನು ಜೂ.17 ರಂದು ಶನಿವಾರ ವಕ್ವಾಡಿ ಪ್ರೌಢ ಶಾಲೆಯಲ್ಲಿ ಆಸರೆ ಟ್ರಸ್ಟ್ ನ ಮೂಲಕ ವಿತರಿಸಲಾಯಿತು.

ದ್ಯಾಗಳ ಮನೆ ಉದ್ಯಮಿ ದಿನಕರ್ ಶೆಟ್ಟಿ ಸಹಾಯಧನವನ್ನು ವಿತರಿಸಿದರು.

ಆಸರೆ ಟ್ರಸ್ಟ್ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ,ರಘುರಾಮ್ ಶೆಟ್ಟಿ, ರವಿರಾಜ್ ಶೆಟ್ಟಿ, ಸುಧಾಕರ್ ಪೂಜಾರಿ, ಆನಂದ ಆಚಾರ್ಯ, ಕಿರಣ ಶೆಟ್ಟಿ, ಅಶೋಕ್ ಪೂಜಾರಿ, ವಿ.ಕೆ ಶೆಟ್ಟಿ, ಪ್ರದೀಪ್ ಶೆಟ್ಟಿ ,ದೀಪಕ್ ಶೆಟ್ಟಿ , ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು

.

ಫಲಾನುಭವಿ ವಿದ್ಯಾರ್ಥಿಗಳಾದ                ನಿರೀಕ್ಷಾ ಆಚಾರ್, ನವನಗರ ಜನತಾ ಕಾಲೋನಿ ವಕ್ವಾಡಿ – 7ನೇ ತರಗತಿ,

ವಿರಾಜ್ ಕುಲಾಲ್ ,ಗುಡಾರ್ ಮಕ್ಕಿ ವಕ್ವಾಡಿ – 3ನೇ ತರಗತಿ.

ಅನ್ವಿತಾ ಪೂಜಾರಿ, ಜನತಾ ಕಾಲೋನಿ ವಕ್ವಾಡಿ – 4ನೇ ತರಗತಿ,

ಮನೀಶ್ ಕುಲಾಲ್, ಕಲ್ ಬೆಟ್ಟು ವಕ್ವಾಡಿ- 4ನೇ ತರಗತಿ.

ರಿಷಿತ್ ಶೆಟ್ಟಿ, ದೊಡ್ಮನೆ ವಕ್ವಾಡಿ – 6ನೇ ತರಗತಿ

. ಆದಿತ್ಯ ಬಣಜಿಗ ಆಚಾರ್ ಬೆಟ್ಟು ವಕ್ವಾಡಿ – 5ನೇ ತರಗತಿ

ಚೇತನ್ (ST) ಎಸ್ ಟಿ ಕಾಲೋನಿ ವಕ್ವಾಡಿ – 7ನೇ ತರಗತಿ

ಶೈಲೇಶ್ ಮಡಿವಾಳ ದೇವಾಡಿಗರಬೆಟ್ಟು ವಕ್ವಾಡಿ – 5ನೇ ತರಗತಿ,

ಗೌರಿ ಶೆಟ್ಟಿ ಬೈಲುಮನೆ ವಕ್ವಾಡಿ – 3ನೇ ತರಗತಿ,

ಐಶ್ವರ್ಯ ಶೆಟ್ಟಿ ಬೆಟ್ಟಿನ್ಮನೆ ವಕ್ವಾಡಿ – 10ನೇ ತರಗತಿ,

ಸಿಂಧು (SC) ಜನತಾ ಕಾಲೋನಿ ವಕ್ವಾಡಿ – 9ನೇ ತರಗತಿ,

ಸುಶ್ಮಿತಾ ಭಂಡಾರಿ ಜನತಾ ಕಾಲೋನಿ ವಕ್ವಾಡಿ – 8ನೇ ತರಗತಿ ,

ಸಾಕ್ಷಿ ದೇವಾಡಿಗ ನವನಗರ್ ಜನತಾ ಕಾಲೋನಿ ವಕ್ವಾಡಿ – 9ನೇ ತರಗತಿ,

ಚಾರಿತ್ರ ಕುಲಾಲ್ ಕಳ್ಳಿಗುಡ್ಡೆ ವಕ್ವಾಡಿ – 8ನೇ ತರಗತಿ.

ಇವರು ಸಹಾಯಧನ ಸ್ವೀಕರಿಸಿದರು. ಸತೀಶ್ ಪೂಜಾರಿ ಕಾರ್ಯಕ್ರಮ ಸಂಯೋಜಿಸಿದ್ದರು

 

Related Articles

Back to top button
error: Content is protected !!