ಸಾಮಾಜಿಕ

45 ವರ್ಷದ ಹೆಂಡತಿಯನ್ನು ಆಕೆಯ 21 ವರ್ಷದ ಪ್ರಿಯಕರನಿಗೆ ಕೊಟ್ಟು ಮದುವೆ ಮಾಡಿಸಿದ ಗಂಡ!

Views: 166

ಕನ್ನಡ ಕರಾವಳಿ ಸುದ್ದಿ: ಇದೀಗ ಪತಿಯೊಬ್ಬ ವಿವಾಹೇತರ ಸಂಬಂಧ ಹೊಂದಿದ್ದ ತನ್ನ ಹೆಂಡತಿಗೆ ಆಕೆಯ ಪ್ರಿಯಕರನ ಜೊತೆಗೆ ಮದುವೆ ಮಾಡಿಸಿದ ಅಪರೂಪದ ಘಟನೆ ನಡೆದಿದೆ.

ಎರಡು ಮಕ್ಕಳ ತಾಯಿಯಾಗಿದ್ದ 45 ವರ್ಷದ ತನ್ನ ಹೆಂಡತಿಗೆ ಆಕೆಯ 21 ವರ್ಷದ ಗೆಳೆಯನೊಂದಿಗೆ ಮದುವೆ ಮಾಡಿಸಿದ್ದಾನೆ.ಇದರ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಜಾರ್ಖಂಡ್‌ನ ಪಕುರ್ ಜಿಲ್ಲೆಯ ಘಘರ್ಜನಿ ಗ್ರಾಮದಲ್ಲಿ ವಾಸವಾಗಿದ್ದರು. ಆದರೆ, ಮಹಿಳೆ ಕಳೆದ ಕೆಲವು ವರ್ಷಗಳಿಂದ 21 ವರ್ಷದ ವ್ಯಕ್ತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಈ ಸಂಬಂಧ ಅವಳ ಗಂಡ ಹಾಗೂ ಗ್ರಾಮಸ್ಥರ ಗಮನಕ್ಕೆ ಬಂದಿದೆ. ಕೊನೆಗೆ ಇದು, ಗ್ರಾಮದ ಜನರ ಸಮ್ಮುಖದಲ್ಲಿ ಪಂಚಾಯ್ತಿ ನಡೆದು ಈ ವಿಷಯ ಬಹಿರಂಗವಾಯಿತು. ಈ ಸಂದರ್ಭದಲ್ಲಿ, ಮಹಿಳೆಯ ಗಂಡ ಸಂಪ್ರದಾಯದ ಪ್ರಕಾರ, ಅವನು ಆಕೆಯ ಹಣೆಯ ಮೇಲಿನ ಸಿಂಧೂರವನ್ನು ಒರೆಸಿ, ಆಕೆಯ ಕೈಯಲ್ಲಿದ್ದ ಬಳೆಗಳನ್ನು ತೆಗೆದು ವಿಚ್ಛೇದನ ನೀಡಿರುವುದಾಗಿ ಘೋಷಿಸಿದ್ದಾನೆ. ನಂತರ, ಅದೇ ವೇದಿಕೆಯಲ್ಲಿ, ಅವನು ತನ್ನ ಹೆಂಡತಿಯನ್ನು ಅವಳ ಪ್ರಿಯಕರನಿಗೆ ಕೊಟ್ಟು ಮದುವೆ ಮಾಡಿಸಿದ್ದಾನೆ.

ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೊಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಲಾಗಿದ್ದು, ವೈರಲ್ ಆಗಿವೆ. ಪ್ರೀತಿ ಮತ್ತು ಪರಸ್ಪರ ಗೌರವಕ್ಕಾಗಿ ಈ ದಿಟ್ಟ ನಿಲುವು ತೆಗೆದುಕೊಳ್ಳಲಾಗಿದೆ ಎಂದು ಹಲವರು ಹೊಗಳಿದರೆ, ಇನ್ನು ಕೆಲವರು ಇದು ವಿವಾಹ ಮತ್ತು ಕುಟುಂಬ ಮೌಲ್ಯಗಳ ಸಾಂಪ್ರದಾಯಿಕ ಮಾನದಂಡಗಳಿಗೆ ಧಕ್ಕೆ ತರುತ್ತಿದೆ ಎಂದು ಟೀಕಿಸಿದ್ದಾರೆ. ಮತ್ತೊಬ್ಬರು “ಇದು ಪ್ರೀತಿಯಾಗಿರಬಹುದು, ಆದರೆ ಇದು ನಮ್ಮ ಮಕ್ಕಳಿಗೆ ಯಾವ ಸಂದೇಶವನ್ನು ನೀಡುತ್ತದೆ?” ಎಂದು ಬರೆದಿದ್ದಾರೆ.

 

Related Articles

Back to top button