ಇತರೆ

ಭೀಕರ ಅಪಘಾತ ಇಬ್ಬರು ಸಾವು: ಐವರು ಗಂಭೀರ

Views: 15

ಕೊರಟಗೆರೆ: ತಾಲೂಕಿನ ಸಿ.ಎನ್ ದುರ್ಗಾ ಹೋಬಳಿಯ ಜಟ್ಟಿ ಅಗ್ರಹಾರ ಬಳಿ ತುಮಕೂರು ಮಧುಗಿರಿ ರಾಜ್ಯ ಹೆದ್ದಾರಿಯಲ್ಲಿ ಲಾರಿ -ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನಪ್ಪಿ, ಐವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಾರಿನಲ್ಲಿ ಒಟ್ಟು ಏಳು ಮಂದಿ ಡಾಬಸ್ ಪೇಟೆಯಲ್ಲಿ ಮದುವೆ ಮುಗಿಸಿಕೊಂಡು ತುಮಕೂರು ಮೂಲಕ ಕೊಡಿಗೆನಹಳ್ಳಿ ಕಡೆ ಹೋಗುತ್ತಿದ್ದರು .ಆಂಧ್ರದಿಂದ ತುಮಕೂರಿಗೆ ಬರುತ್ತಿರುವ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಪ್ರಕರಣ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Related Articles

Back to top button
error: Content is protected !!