ಶಿಕ್ಷಣ

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಸ್ರೂರಿನ ‘ವರದೇಂದ್ರ ಫಲೋದ್ಯಾನ’ ಕ್ಕೆ ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಭೇಟಿ     

Views: 347

ಕನ್ನಡ ಕರಾವಳಿ ಸುದ್ದಿ:”ವಾತಾವರಣದ ಅನುಕೂಲ ಮತ್ತು ಪ್ರತಿಕೂಲ ಬದಲಾವಣೆಗಳನ್ನು ತಿಳಿದುಕೊಂಡು ವಿಶೇಷ ತಳಿಯ ಹಣ್ಣುಗಳನ್ನು ಬೆಳೆಸಬೇಕಾಗುತ್ತದೆ. ವಾಣಿಜ್ಯ ಬೆಳೆಯ ಹಣ್ಣುಗಳನ್ನು ಬೆಳೆಯಲು ತೋಟಗಾರಿಕೆಯ ಪ್ರಾಥಮಿಕ ಜ್ಞಾನ ಇರಲೇ ಬೇಕಾಗುತ್ತದೆ ” ಎಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಆರ್. ಎನ್.‌‌ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ಬಸ್ರೂರಿನ ‘ವರದೇಂದ್ರ ಫಲೋದ್ಯಾನ’ ದ ಭೇಟಿಯ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾದ ದಿವ್ಯಾ ನಾಯಕ್ ತೆಕ್ಕಟ್ಟೆ ಇವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ನವೀನ ಕುಮಾರ ಶೆಟ್ಟಿಯವರು ಪರಿಸರ ನಾಶವನ್ನು ತಡೆಗಟ್ಟುವುದು ಮಾತ್ರವಲ್ಲದೇ ಸಸ್ಯ ಸಂಪತ್ತನ್ನು ಹೊಸದಾಗಿ ಬೆಳೆಸುತ್ತಾ ಇರುವುದೂ ಕೂಡ ಯುವಜನರ ಜವಾಬ್ದಾರಿಯಾಗಿದೆ ಎಂದು ಕರೆ ನೀಡಿದರು.

ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಸುಷ್ಮಾ ಶೆಣೈ, ವಾಣಿಜ್ಯಶಾಸ್ತ್ರ ಉಪನ್ಯಾಸಕಿ ದೀಪಾ ಶೆಟ್ಟಿ, ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥೆ ಜ್ಯೋತಿ, ಅರ್ಥಶಾಸ್ತ್ರ ಉಪನ್ಯಾಸಕಿ‌ ನಾಗರತ್ನಾ ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕರಾದ ಶ್ರೀ ರಾಮ್ ಶೆಟ್ಟಿಯವರು ಈ‌ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಯವರು ಸ್ವಾಗತಿಸಿದರು.

ಇಂಗ್ಲೀಷ್ ಭಾಷಾ ಉಪನ್ಯಾಸಕಿ ಸುಮತಿ ಶೆಣೈ ಧನ್ಯವಾದ ಸಲ್ಲಿಸಿದರು.

Related Articles

Back to top button
error: Content is protected !!