ಇತರೆ

ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ತಂಡದ ಓರ್ವ ನೀರು ಪಾಲು

Views: 0

ಭಟ್ಕಳ:  ಕಳೆದ ಮೂರು ನಾಲ್ಕು ದಿನಗಳಿಂದ ಅರಬ್ಬಿ ಸಮುದ್ರದಲ್ಲಿ ಬೀಪರ್ ಜಾಯ್ ಚಂಡಮಾರುತ ತೀವ್ರತೆಯ ನಡುವೆ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ತಂಡವೊಂದು ಕಡಲಿನಲ್ಲಿ ಇಳಿದ ಸಂದರ್ಭ ಓರ್ವ ನೀರು ಪಾಲಾಗಿದ್ದು, ಇಬ್ಬರನ್ನು ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ.ಧರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ನಿವಾಸಿಗಳ 22 ಜನರು ಗುಂಪೊಂದು ಸಿಗಂದೂರು,ಕೊಲ್ಲೂರು ಪ್ರವಾಸ ಮುಗಿಸಿ, ಮುರುಡೇಶ್ವರಕ್ಕೆ ಆಗಮಿಸಿದ್ದರು. ಸಮುದ್ರದ ಅಬ್ಬರದ ಅಲೆಯನ್ನು ಲೆಕ್ಕಿಸದೆ ಸಮುದ್ರಕ್ಕಿಳಿದು, ಆಡವಾಡುವ ವೇಳೆ ಮೂವರು ಅಲೆಯ ರಭಸಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದರು.

ಸಂತೋಷ( 19 )ನೀರಿನಲ್ಲಿ ಕೊಚ್ಚಿ ಹೋಗಿದ್ದು, ,ಮದಗಿರಿ ಗೌಡ ಹಾಗೂ ಸಂಜೀವ ಹೆಬ್ಬಳ್ಳಿ ಎನ್ನುವರನ್ನು ರಕ್ಷಣೆ ಮಾಡಲಾಗಿದೆ.

Related Articles

Back to top button
error: Content is protected !!