ಜನಮನ

ವಕ್ವಾಡಿ ರಸ್ತೆಯ ಬಳಿ ವಿದ್ಯಾರ್ಥಿನಿ ಜತೆ ಅಸಭ್ಯವಾಗಿ ವತಿ೯ಸಿದ ವ್ಯಕ್ತಿಗೆ ಚಪ್ಪಲಿಯೇಟು 

Views: 0

ಕುಂದಾಪುರ :ಹಾಸ್ಟೆಲ್ ನಿಂದ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾಥಿ೯ನಿ ಜತೆ ವ್ಯಕ್ತಿಯೊಬ್ಬ ಅಸಭ್ಯ ವತ೯ನೆ ತೋರಿದ್ದರಿಂದ ಆಕೆ ಚಪ್ಪಲಿಯಿಂದ ಹೊಡೆದ ಘಟನೆ ಕುಂದಾಪುರ ತಾಲೂಕಿನ ಬೀಜಾಡಿ – ಹೂವಿನಕೆರೆ ಕ್ರಾಸ್ ವಕ್ವಾಡಿ ರಸ್ತೆಯಲ್ಲಿ ನಡೆದಿದೆ.  

ವಿದ್ಯಾಥಿ೯ನಿ ಹಾಸ್ಟೆಲ್ ನಿಂದ ಕಾಲೇಜಿಗೆಂದು ನಡೆದುಕೊಂಡು ಹೋಗುತ್ತಿದ್ದಾಗ ನಜೀರ್ ಎಂಬಾತ ಹಿಂದಿನಿಂದ ಬಂದು ಕಿರುಕುಳ ನೀಡಿ ಅಸಭ್ಯವಾಗಿ ವತಿ೯ಸಿದ್ದ, ಹೆದರಿದ ವಿದ್ಯಾಥಿ೯ನಿ ಜೋರಾಗಿ ಕಿರುಚಿಕೊಂಡಿದ್ದರಿಂದ ಆಕೆಯ ನೆರವಿಗೆ ಸ್ಥಳೀಯರು  ಬಂದು ನಜೀರನನ್ನು ವಿಚಾರಿಸಿದ್ದಾರೆ. ನಂತರ ವಿದ್ಯಾಥಿ೯ನಿ ತನ್ನ ಕಾಲಿನಿಂದ ಚಪ್ಪಲಿ ತೆಗೆದು ಆತನಿಗೆ ಹೊಡೆದಿದ್ದಾಳೆ. ಸೇರಿದ ಜನರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.ವಿದ್ಯಾಥಿ೯ನಿಯ  ಹೇಳಿಕೆ  ಆಧರಿಸಿ,  ಆರೋಪಿಗೆ 14 ದಿನ ನ್ಯಾಯಾಂಗ  ಬಂಧನಕ್ಕೆ  ಆದೇಶಿಸಿ, ನ್ಯಾಯಾಲಯಕ್ಕೆ  ಹಾಜರುಪಡಿಸಲಾಗಿದೆ. 

 ಮಾದಕ  ವ್ಯಸನಿ ಕಿಡಿಗೇಡಿಗಳ ಬಗ್ಗೆ  ನಿಗಾ ಇರಲಿ…. 

ಈ ಪ್ರದೇಶದ ವ್ಯಾಪ್ತಿಯಲ್ಲಿ ಮಾದಕ ವ್ಯಸನಿಗಳು ಗುಂಪು ಕಟ್ಟಿಕೊಂಡು ತಿರುಗಾಡುತ್ತಿದ್ದು, ಅವರ ಬಗ್ಗೆ ಪ್ರಶ್ನೆ ಮಾಡಿದರೆ, ಸಾವ೯ಜನಿಕರ ಆಸ್ತಿ ಪಾಸ್ತಿಗಳಿಗೆ ಹಾನಿಮಾಡಿದ ಘಟನೆ ಬಗ್ಗೆ ತೊಂದರೆಗೆ ಒಳಗಾದವರು ಈ ಹಿಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಹಿಂದೆ ಇಂತಹದ್ದೆ ಘಟನೆ ನಡೆದ ಬಗ್ಗೆ ಸಾಮಾಜಿಕ ಕಾರ್ಯಕತ೯ರೊಬ್ಬರು ದೂರು ನೀಡಿದ್ದಾರೆ. ಕಿಡಿಗೇಡಿಗಳು ಈ ಪ್ರದೇಶದಲ್ಲಿ ಠಿಕಾಣಿ ಹೂಡಿ ರಾತ್ರಿ ಹಗಲೆನ್ನದೆ  ಪಾಟಿ೯ ನಡೆಸಿ ಅಲ್ಲಲ್ಲಿ ಬೆಂಕಿ ಹಚ್ಚಿ ಸಾವ೯ಜನಿಕರಿಗೆ ತೊಂದರೆ ನೀಡುತ್ತಿರವ ಗ್ಯಾಂಗ್ ಬಗ್ಗೆ ಪೊಲೀಸರು ನೀಗಾ ವಹಿಸಬೇಕಾಗಿದೆ. ಈ ಸುತ್ತಮುತ್ತಲ ಪ್ರದೇಶಗಳಲ್ಲಿ ಸಿ.ಸಿ ಕ್ಯಾಮರಗಳು ಸರಿಯಾಗಿದೆಯೋ ಎನ್ನುವುದರ ಬಗ್ಗೆ ಕಾಳಜಿವಹಿಸಬೇಕು.

Related Articles

Back to top button
error: Content is protected !!