ರಾಜಕೀಯ
4ನೇ ಭಾರಿ ಸ್ಪರ್ಧೆಗೆ ವೀರಪ್ಪ ಮೊಯಿಲಿ ಸುಳಿವು?

Views: 0
ಕುಂದಾಪುರ : ಲೋಕಸಭಾ ಚುನಾವಣೆಗೆ ಒಂದು ವಷ೯ ಬಾಕಿ ಇರುವಾಗಲೇ ಈ ಭಾರಿ ಕಾಂಗ್ರೆಸ್ ನಲ್ಲಿ ಟಿಕೆಟ್ ಯಾರಿಗೆ ಎನ್ನುವ ಕುತೂಹಲ ಮತ್ತು ಚಚೆ೯ ನಡೆಯುತ್ತಿದೆ.
ಈ ನಡುವೆ ಸೋಮವಾರ ನಗರದಲ್ಲಿ ಕಾಂಗ್ರೆಸ್ ನಿಂದ ನಡೆದ ಕಾರ್ಯಕತ೯ರಿಗೆ ಕೃತಜ್ಞತೆ ಸಭೆಯಲ್ಲಿ ಮಾಜಿ ಸಂಸದ ವೀರಪ್ಪ ಮೊಯಿಲಿ ಆಡಿರುವ ಮಾತುಗಳಿಂದ ನಾನೂ ಸಹ ಟಿಕೆಟ್ ಅಕಾಂಕ್ಷಿ ಎನ್ನುವುದನ್ನು ವ್ಯಕ್ತಪಡಿಸಿದರು.
2009 ಮತ್ತು 2014 ರ ಚುನಾವಣೆಯಲ್ಲಿ ಚಿಕ್ಕ ಬಳ್ಳಾಪುರ ಕ್ಷೇತ್ರದಿಂದ ಮೊಯಿಲಿ ಗೆಲುವು ಕಂಡಿದ್ದರು, 2019 ರಲ್ಲಿ ಸೋಲು ಅನುಭವಿಸಿ 83 ಪ್ರಾಯದ ಮೊಯಿಲಿ ನಾಲ್ಕನೇ ಭಾರಿ ಸ್ಪಧೆ೯ಗೆ ಸಿದ್ದರಾಗಿದ್ದಾರೆ.
ಮೊಯಿಲಿ ಅವರು ಚಿಕ್ಕ ಬಳ್ಳಾಪುರದಲ್ಲಿ ಕಚೇರಿ ಆರಂಭಿಸುವುದಾಗಿ ಪ್ರಕಟಿಸಿದ್ದಾರೆ. ಇನ್ನೂ ನನಗೆ 10 ವಷ೯ ರಾಜಕೀಯ ಮಾಡುವ ಶಕ್ತಿ ಕುರಿತು ಹೇಳುವುದರ ಮೂಲಕ ನಾಲ್ಕನೇ ಭಾರಿ ಅಖಾಡಕ್ಕೆ ಸುಳಿವು ನೀಡಿದ್ದಾರೆ.






