ಇತರೆ
ಉತ್ತಮ ನೇಕಾರ ಪುರಸ್ಕೃತ ಮಂಚಕಲ್ ದಯಾನಂದ ಶೆಟ್ಟಿಗಾರ ನಿಧನ

Views: 5
ಉಡುಪಿ : ಶಿವ೯ ಮಂಚಕಲ್ ನಿವಾಸಿ ಶ್ರೀ ದಯಾನಂದ ಶೆಟ್ಟಿಗಾರ(82) ಅವರು ಜೂನ್ 6 ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಇಬ್ಬರು ಪುತ್ರರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಅವರು ಕೈಮಗ್ಗ ನೇಕಾರಿಕೆಯಲ್ಲಿ ತೊಡಗಿಸಿಕೊಂಡು, ನೇಕಾರಿಕೆ ಸೊಸೈಟಿಯಲ್ಲಿಯೂ ಸಕ್ರಿಯರಾಗಿ, ಸಮಾಜಕ್ಕೆ ಮಾಗ೯ದಶ೯ಕರಾಗಿರುತ್ತಾರೆ. ಇವರ ಸಾಧನೆಗೆ ಹಲವಾರು ಸಂಘ- ಸಂಸ್ಥೆಗಳಿಂದ ಗೌರವ ಪಡೆದಿರುತ್ತಾರೆ.
2010 ರಲ್ಲಿ ಕಲ್ಯಾಣಪುರ ಶ್ರೀ ಆದಿಶಕ್ತಿ ಬ್ರಹ್ಮಲಿಂಗ ದೇವಸ್ಥಾನದಲ್ಲಿ ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ). ಮತ್ತು ದ.ಕ.ಜಿಲ್ಲಾ ಪದ್ಮಶಾಲಿ ವಿದ್ಯಾವಧ೯ಕ ಸಂಘ (ರಿ) ಇದರ ವಾಷಿ೯ಕ ಮಹಾಸಭೆಯಲ್ಲಿ ‘ಉತ್ತಮ ನೇಕಾರ’ ಪ್ರಶಸ್ತಿ ಪುರಸ್ಕೃತರಾಗಿ ಗೌರವ ಪಡೆದಿರುತ್ತಾರೆ.






