ಇತರೆ
ಇಬ್ಬರು ಸಹೋದರಿಯರು ನಾಪತ್ತೆ

Views: 87
ಕನ್ನಡ ಕರಾವಳಿ ಸುದ್ದಿ; ಸಹೋದರಿಯರು ಮನೆಗೆ ಮರಳಿ ಬಾರದೆ ನಾಪತ್ತೆಯಾಗಿರುವ ಘಟನೆ ಉಡುಪಿಯ ಹಿರಿಯಡ್ಕದಲ್ಲಿ ನಡೆದಿದೆ.
ಮಂಜುಳಾ (24) ಹಾಗೂ ಮಲ್ಲಿಕಾ (18) ನಾಪತ್ತೆಯಾಗಿರುವ ಸಹೋದರಿಯರು.
ಮಂಜುಳಾ ಅವರು 5 ಅಡಿ 1 ಇಂಚು ಎತ್ತರ, ಎಣ್ಣೆಗಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರಿಗೆ 10 ವರ್ಷಗಳ ಹಿಂದೆ ಮದುವೆಯಾಗಿದ್ದು, ಕಳೆದ 2 ವರ್ಷಗಳಿಂದ ತವರು ಮನೆಯಲ್ಲಿಯೇ ವಾಸವಾಗಿದ್ದಾರೆ.
ಮಲ್ಲಿಕಾ (18) 5 ಅಡಿ ಎತ್ತರ, ಎಣ್ಣೆಗಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಇವರೂ ಸಹ ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಹತ್ತನೇ ತರಗತಿವರೆಗೆ ಶಾಲೆಗೆ ಹೋಗಿದ್ದು, ಬಳಿಕ ಮನೆಯಲ್ಲಿಯೇ ಇದ್ದಾರೆ.
ಈ ಘಟನೆ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.