ಜನಮನ

ಗ್ರಾಮ ಮಟ್ಟದ ಅಧಿಕಾರಿಗಳು, ಸಮುದಾಯದ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳಿಗೆ ‘ಕಾನೂನಿನ ಅರಿವು’

Views: 0

ಕುಂದಾಪುರ : ನ್ಯಾಯ ಮತ್ತು ಕಾನೂನು ಇಲಾಖೆ ನವದೆಹಲಿ. ಇವರ ಸಹಯೋಗದೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮತ್ತು ಅಬ್ಬುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮೈಸೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಮಟ್ಟದ ಚುನಾಯಿತ ಪ್ರತಿನಿಧಿಗಳು, ಗ್ರಾಮ ಮಟ್ಟದ ಅಧಿಕಾರಿಗಳು ಹಾಗೂ ಸಮುದಾಯದ ಪ್ರತಿನಿಧಿಗಳಿಗೆ ಕಾನೂನಿನ ಅರಿವು ಮತ್ತು ತರಬೇತಿ ಕಾರ್ಯಕ್ರಮವನ್ನು ಕುಂದಾಪುರ ತಾಲೂಕು ಪಂಚಾಯತ್ ಸಾಮಥ್೯  ಸೌಧದಲ್ಲಿ ಸೋಮವಾರ ನಡೆಯಿತು.

ಕುಂದಾಪುರ ತಾಲೂಕು ಪಂಚಾಯತ್ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರ  ಮಯ್ಯ ಅವರು  ಕಾರ್ಯಕ್ರಮ ಉದ್ಘಾಟಿಸಿದರು.

ಸತೀಶ್ಚಂದ್ರ ಕಾಳಾವರ್ಕರ್ ವಕೀಲರು ಕುಂದಾಪುರ, ಮಂಜುನಾಥ ಗುಡ್ಡೆಯಂಗಡಿ, ಸರಿತಾ. ಮೇಲ್ವೀಚಾರಕರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ,ಅಶೋಕ್ ನಾಯಕ್ ಶಿಕ್ಷಣ ಇಲಾಖೆ, ಗಣೇಶ್ ,ಪಂಚಾಯತ್ ಅಭಿವೃದ್ಧಿ ಅಧಿಕಾರಿ  ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ವಿಜಯ ಕುಮಾರ್ ,ಅಧ್ಯಕ್ಷರು. ಗ್ರಾಮ ಪಂಚಾಯತ್ ಕಾವ್ರಾಡಿ, ಬೀಮವ್ವ, ಅಧ್ಯಕ್ಷರು. ಗ್ರಾಮ ಪಂಚಾಯತ್ ತಲ್ಲೂರು, ಆಶಾಲತಾ ಶೆಟ್ಟಿ. ಅಧ್ಯಕ್ಷರು ಗ್ರಾಮ ಪಂಚಾಯತ್ ಕಾಳಾವರ, ಕೆ. ಸಿ. ರಾಜೇಶ್. ಸಹಾಯಕ ನಿರ್ದೇಶಕರು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕುಂದಾಪುರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

ವಿಕೇಂದ್ರಿಕೃತ ತರಬೇತಿ ಸಂಯೋಜಕ ANSIRD ಮೈಸೂರು ಇವರು ಕಾರ್ಯಕ್ರಮ ಸಂಯೋಜಿಸಿ,ಮುಖ್ಯ ತರಬೇತಿ ನೀಡಿ ಮಾತನಾಡಿ, ಜನಸಾಮಾನ್ಯರಿಗೂ ಕಾನೂನಿನ ಅರಿವು ಅತ್ಯಗತ್ಯ, ಮಾಹಿತಿ ಕೊರತೆಯಿಂದಾಗಿ ಯಾರೂ ಕಾನೂನನ್ನು ಉಲ್ಲಂಘಿಸಬಾರದು, ಮಕ್ಕಳಿಂದ  ಹಿಡಿದು  ಹಿರಿಯರ ವರೆಗೂ ಎಲ್ಲರೂ ಈ ಎಲ್ಲಾ ಮಾಹಿತಿ ಪಡೆದು ಶೋಷಣೆ ಮುಕ್ತ ಸಮಾಜ ನಿರ್ಮಾಣ ಆಗಬೇಕು ಎಂಬುವುದೇ ನಮ್ಮ ಆಶಯ ಎಂದರು.

Related Articles

Back to top button
error: Content is protected !!