ರಾಜಕೀಯ

ವಕ್ವಾಡಿ ಬಿಜೆಪಿ ಕಾರ್ಯಕತ೯ರು ಮತ್ತು ಗ್ರಾಮಸ್ಥರಿಂದ ಶಾಸಕ ಕಿರಣ್ ಕೊಡ್ಗಿಗೆ ಸನ್ಮಾನ 

Views: 0

ಕುಂದಾಪುರ : ನನ್ನ ರಾಜಕೀಯ ಜೀವನದ ಹೋರಾಟದಲ್ಲಿ ನೈತಿಕ ಬಲ ನೀಡಿದವರು ನೀವು, ನಿಮ್ಮೆಲ್ಲರ ನಿರಂತರ ಪರಿಶ್ರಮದಿಂದ ನಾನು ಗೆಲ್ಲಲು ಸಾಧ್ಯವಾಯಿತು.

ನಿಮ್ಮೆಲ್ಲರ ಸಮಸ್ಯೆಗಳಿಗೆ ಸದಾ ಸ್ಪಂದಿಸಿ, ಶಕ್ತಿಮೀರಿ ಕೆಲಸ ಮಾಡುತ್ತೇನೆ, ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಕ್ಷೇತ್ರದಲ್ಲಿ ನಿರಂತರ ಕೆಲಸ ಮಾಡಿ ಜನರ ವಿಶ್ವಾಸ ಗಳಿಸಿದ್ದರಿಂದ ನನ್ನ ಗೆಲುವಿಗೆ ಕಾರಣವಾಯಿತು, ಅವರ ಮಾಗ೯ದಶ೯ನದಲ್ಲಿಯೇ ನಾನು ಈ ಕ್ಷೇತ್ರದಲ್ಲಿ ನಿಮ್ಮ ಸೇವೆ ಮಾಡುತ್ತೇನೆ ಎಂದು ಕುಂದಾಪುರ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಕಿರಣ್ ಕೊಡ್ಗಿ ಹೇಳಿದರು.

ಅವರು ವಕ್ವಾಡಿ ಮಹಾಲಿಂಗೇಶ್ವರ ಸಭಾಗೃಹದಲ್ಲಿ ವಕ್ವಾಡಿ ಬಿಜೆಪಿ ಕಾರ್ಯಕತ೯ರು ಮತ್ತು ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಕುಂದಾಪುರ ಕ್ಷೇತ್ರ ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ, ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿದೇ೯ಶಕ ಶಾನಾಡಿ ಶರತ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ರವಿರಾಜ್ ಶೆಟ್ಟಿ, ಶಾರದಾ ದೇವಾಡಿಗ ಸಭೆಯಲ್ಲಿ ಇದ್ದರು.

ಇದೇ ಸಂದಭ೯ದಲ್ಲಿ ವಕ್ವಾಡಿ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ , ವಕ್ವಾಡಿ ಪ್ರೆಂಡ್ಸ್ ವತಿಯಿಂದ ನೂತನ ಶಾಸಕರನ್ನು ಸನ್ಮಾನಿಸಲಾಯಿತು.

ಮಂಡಲದ ಪ್ರಧಾನ ಕಾಯ೯ದಶಿ೯ ಸತೀಶ್ ಪೂಜಾರಿ ಸ್ವಾಗತಿಸಿ, ವಂದಿಸಿದರು. ಗಿರೀಶ್ ಐತಾಳ್ ನಿರೂಪಿಸಿದರು.

Related Articles

Back to top button
error: Content is protected !!