ಇತರೆ

ಒಂದೇ ಸ್ಥಳದಲ್ಲಿ ಒಟ್ಟಿಗೆ 3 ರೈಲುಗಳ ಅಪಘಾತ ಹೇಗಾಯಿತು? ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ : ಮೋದಿ

Views: 0

ಮಾಗ೯ದಲ್ಲಿ ರೈಲೊಂದು ಹಳಿ ತಪ್ಪಿದರೂ ಅದೇ ಮಾಗ೯ದಲ್ಲಿ ಹೇಗೆ ಮತ್ತೊಂದು ರೈಲು ಬಂತು? ಆ ಭಾಗದ ರೈಲ್ವೆ ಸಿಬ್ಬಂದಿ ಹೇಗೆ ಕೋರಮಂಡಲ್ ರೈಲು ಹೋಗಲು ಬಿಟ್ಟರು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಪ್ರಧಾನ ಮಂತ್ರಿ ಮೋದಿ ಘಟನಾ ಸ್ಥಳಕ್ಕೆ ಬೇಟಿ ನೀಡಿ, ತ್ರಿವಳಿ ರೈಲು ಅಪಘಾತವನ್ನು ಕೇಂದ್ರ ಸಕಾ೯ರ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇಂದೊಂದು ಗಂಭೀರ ಘಟನೆಯಾಗಿದ್ದು,ಪ್ರತಿಯೊಂದು ಕೋನದಿಂದ ತನಿಖೆ ನಡೆಸಲು ಸೂಚನೆ ನೀಡಲಾಗಿದೆ.

ಗಾಯಾಳುಗಳಿದ್ದ ಬಾಲ್ ಸೋರ್ ಹಾಗೂ ಕಟಕ್ ನ ಆಸ್ಪತ್ರೆಗಳಿಗೆ ಭೇಟಿ ನೀಡಿದ ಪ್ರಧಾನಿ ಸಾಂತ್ವನ ಹೇಳಿದ್ದಲ್ಲದದೇ ಎಲ್ಲಾ ನೆರವಿಗೆ ಭರವಸೆ ನೀಡಿದ್ದಾರೆ.

ಭೀಕರ ದುರಂತದ ಪರಿಣಾಮ ರೈಲು ಹಳಿಗಳ ಮೇಲೆ ಹೆಣಗಳ ರಾಶಿಯೇ ಬಿದ್ದಿದೆ. ರೈಲು ಬೋಗಿಗಳು ಒಂದರ ಮೇಲೆ ಒಂದು ಬಿದ್ದಿರುವುದರಿಂದ ರಕ್ಷಣಾ ಕಾರ್ಯ ಕ್ಲಿಷ್ಟಕರವಾಗಿದೆ.

Related Articles

Back to top button
error: Content is protected !!