ಜನಮನ

ಜೂ. 8 ಕ್ಕೆ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಕ್ಕೆ ತತ್ ಕ್ಷಣ ಪರಿಹಾರ “ಲೋಕ ಅದಾಲತ್”

Views: 0

ಉಡುಪಿ : ಕಡಿಮೆ ಖಚಿ೯ನಲ್ಲಿ ಶೀಘ್ರ ನ್ಯಾಯ ತೀರ್ಮಾನಕ್ಕಾಗಿ, ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ತತ್ ಕ್ಷಣ ಪರಿಹಾರಕ್ಕಾಗಿ ಜೂ.8 ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಿದ್ದು, ಸಾವ೯ಜನಿಕರು ಇದರ ಸದುಪಯೋಗಪಡೆದುಕೊಳ್ಳುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಮಿ೯ಳಾ. ಎಸ್. ತಿಳಿಸಿದ್ದಾರೆ.

ಲೋಕ ಅದಾಲತ್ ನಲ್ಲಿ ಸಾವ೯ಜನಿಕರು ರಾಜಿಯಾಗಬಲ್ಲ ಬ್ಯಾಂಕ್ ಸಾಲ ವಸೂಲಾತಿ, ಉದ್ಯೋಗದಲ್ಲಿ ಪುನರ್ ಸ್ಥಾಪನೆ. ಕೈಗಾರಿಕಾ ಕಾಮಿ೯ಕ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ವೈವಾಹಿಕ ಪ್ರಕರಣ, ಗ್ರಾಹಕರ ಪರಿಹಾರ ಪ್ರಕರಣ, ಚೆಕ್ ಅಮಾನ್ಯ, ಸಾಲ ವಸೂಲಾತಿ, ಮೋಟಾರು ವಾಹನ, ಕಾಮಿ೯ಕರ ವಿವಾದ, ವಿದ್ಯುತ್, ನೀರು, ಭೂಸ್ವಾಧೀನ, ಪಿಂಚಣಿ ಇನ್ನಿತರ ರಾಜಿಯಾಗಬಲ್ಲ ಸಿವಿಲ್ ಹಾಗೂ ಇತರ ಪ್ರಕರಣ ಹಾಗೂ ಖಾಯಂ ಜನತಾ   ನ್ಯಾಯಾಲಯದಲ್ಲಿ  ಬಾಕಿ  ಇರುವ ಪ್ರಕರಣಗಳನ್ನು ಇತ್ಯಥ೯ಪಡಿಸಿಕೊಳ್ಳಬಹುದಾಗಿದೆ.

ಸಂಧಾನಕಾರರ ಒಪ್ಪಿಗೆಯಾದಲ್ಲಿ, ಕಡಿಮೆ ಖಚಿ೯ನಲ್ಲಿ ಶೀಘ್ರ ನ್ಯಾಯ ತೀಮಾ೯ನಕ್ಕಾಗಿ ಇದೊಂದು ವಿಶೇಷ ಅವಕಾಶವಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು 1800-425-90900 ಅಥವಾ ಜಿಲ್ಲಾ, ತಾಲೂಕು ಕಾನೂನು ಸೇವಾ ಪ್ರಾಧಿಕಾರವನ್ನು ಸಂಪಕಿ೯ಸಬಹುದಾಗಿದೆ.

Related Articles

Back to top button
error: Content is protected !!