ಇತರೆ

ಉಡುಪಿಯವರಿದ್ದ ಕಾರು ಮೈಸೂರಿನಲ್ಲಿ ಪಲ್ಟಿ: ಮಗು ಸಾವು, ಒಂದೇ ಕುಟುಂಬದ ಐದು ಮಂದಿ ಗಂಭೀರ 

Views: 228

ಕನ್ನಡ ಕರಾವಳಿ ಸುದ್ದಿ: ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ 2 ವರ್ಷದ ಮಗು ಮೃತಪಟ್ಟಿದ್ದು ಒಂದೇ ಕುಟುಂಬದ ಐದು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಮೈಸೂರಿನ ಹಿನಕಲ್ ರಿಂಗ್ ರಸ್ತೆ ಜಂಕ್ಷನ್ ಬಳಿ ಸೋಮವಾರ ಸಂಜೆ ನಡೆದಿದೆ.

ಬೆಂಗಳೂರಿನ ನಿವಾಸಿ ನರೇಶ್ ಅವರ ಪುತ್ರಿ ಮೈಥಿಲಿ (2) ಮೃತ ಬಾಲಕಿ. ಕಾರಿನಲ್ಲಿ ಐದು ಮಂದಿ ಗಾಯಗೊಂಡಿದ್ದಾರೆ. ಮೂಲತಃ ಉಡುಪಿ ನಿವಾಸಿಯಾದ ನರೇಶ್ ಅವರು ಕುಟುಂಬ ಸಮೇತ ಕೇರಳದ ವಯನಾಡಿಗೆ ತೆರಳಿದ್ದು ಸೋಮವಾರ ಸಂಜೆ ಕಾರಿನಲ್ಲಿ ಬೆಂಗಳೂರಿಗೆ ಹಿಂದಿರುಗುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು, ಕಾರಿನಲ್ಲಿದ್ದ ನರೇಶ್, ಅವರ ಪತ್ನಿ ಸಂಧ್ಯಾ, ಭಾಮೈದ ಸಂದೇಶ್, ಡಾ| ಲಿಖಿತಾ, ನರೇಶ್ ಅತ್ತೆ ಮನೋರಮಾ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ವಿವಿಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!