ರಾಜಕೀಯ
ಜೂನ್ ಪ್ರಥಮ ವಾರ ಸಚಿವ ಸಂಪುಟ ಸಭೆ: ಅಂದೇ ಗ್ಯಾರಂಟಿ ಜಾರಿ?

Views: 0
ಗ್ಯಾರಂಟಿ ಹೆಸರಿನಿಂದ ಅಧಿಕಾರ ಹಿಡಿದ ಕಾಂಗ್ರೆಸ್ ಕೊನೆಗೂ ಯೋಜನೆ ಜಾರಿಗೆ ಮುಂದಾಗಿದೆ. ಜೂನ್ ಪ್ರಥಮ ವಾರ ಸಭೆ ನಡೆಸಿ ಅಂದೇ ಗ್ಯಾರಂಟಿ ಘೋಷಿಸುವ ನಿರೀಕ್ಷೆ ಇದೆ.
ನೇರವಾಗಿ ಯೋಜನೆ ಅನುಷ್ಠಾನ ಮಾಡಲು ಆಗುವುದಿಲ್ಲ ಕೆಲವು ಸಿದ್ಧತೆಗಳು ಬೇಕಿರುತ್ತದೆ.
ಗೃಹ ಲಕ್ಷ್ಮೀ ಯೋಜನೆಗೆ ಕೆಲವು ಗೊಂದಲಗಳಿವೆ, ಅದನ್ನು ನಿವಾರಿಸಬೇಕು . ವಿದ್ಯುತ್ ಬಿಲ್ 200 ಯುನಿಟ್ ವರೆಗೆ ಕಟ್ಟಬೇಕಿಲ್ಲ ಎಂದು ಹೇಳಿದ್ದೇವು, ಬಾಡಿಗೆ ಮನೆಯಲ್ಲಿದ್ದರೂ ಅವರನ್ನು ಪರಿಶೀಲಿಸಬೇಕು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ. ಕೆ. ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು , ಎಲ್ಲಾ ಸಚಿವರು ಭಾಗಿಯಾಗಿ ಈ ಬಗ್ಗೆ ಸ್ಪಷ್ಟ ನಿಧಾ೯ರ ಕೈಗೊಳ್ಳಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.






