ರಾಜಕೀಯ
‘ಗ್ಯಾರಂಟಿ’ ಗೆ ಷರತ್ತು ವಿಧಿಸಿದರೆ ಬೀದಿಗಿಳಿದು ಹೋರಾಟ : ಆರ್. ಅಶೋಕ್

Views: 0
ಕಾಂಗ್ರೆಸ್ ಅಧಿಕಾರಕ್ಕೆ ಬಂದ 24 ತಾಸುಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ವಾಗ್ದಾನ ನೀಡಲಾಗಿತ್ತು. ಅಧಿಕಾರ ವಹಿಸಿಕೊಂಡು 240 ತಾಸು ಕಳೆದರೂ ಯೋಜನೆಗಳು ಜಾರಿಯಾಗಿಲ್ಲ, ಕಾಂಗ್ರೆಸ್ 5 ಗ್ಯಾರಂಟಿಗೆ ಷರತ್ತು ವಿಧಿಸಿದರೆ ಬೀದಿಗೆ ಇಳಿದು ಪ್ರತಿಭಟಿಸಲಾಗುವುದು ಎಂದು ಮಾಜಿ ಸಚಿವ ಆರ್. ಅಶೋಕ್ ಹೇಳಿದರು.
ಗ್ಯಾರಂಟಿ ಘೋಷಣೆಯ ಹಿನ್ನಲೆಯಲ್ಲಿ ಮಹಿಳೆಯರು ಸಾರಿಗೆ ಬಸ್ ಗಳಲ್ಲಿ ಟಿಕೆಟ್ ಪಡೆಯಬಾರದು, ಗ್ರಾಹಕರು ವಿದ್ಯುತ್ ಬಿಲ್ ಪಾವತಿಸಬಾರದು ಎಂದು ಅಗ್ರಹಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಮಾತನಾಡಿ, ಕಾಂಗ್ರೆಸ್ ಚುನಾವಣಾ ಪೂವ೯ದಲ್ಲಿ ಗ್ಯಾರಂಟಿ ಪ್ರಕಟಿಸುವಾಗ ಷರತ್ತು ವಿಧಿಸಿರಲಿಲ್ಲ, ಆದರೆ, ಅನುಷ್ಠಾನ ಗೊಳಿಸುವ ಸಂದಭ೯ದಲ್ಲಿ ಷರತ್ತು ವಿಧಿಸಿದರೆ ಹೋರಾಟ ಮಾಡಲು ಸಿದ್ಧ, ಭರವಸೆ ನೀಡಿದಂತೆ ಗ್ಯಾರಂಟಿ ಕೂಡಲೇ ಜಾರಿಗೊಳಿಸಬೇಕು ಎಂದು ಎಚ್ಚರಿಸಿದರು.






