ಧಾರ್ಮಿಕ

ಮಹಾಕುಂಭ ಮೇಳದಲ್ಲಿ ಜೋಡಿಯಾಗಿ ಕಾಣಿಸಿಕೊಂಡ ಅನುಶ್ರೀ- ರಾಜ್ ಬಿ ಶೆಟ್ಟಿ

Views: 313

ಕನ್ನಡ ಕರಾವಳಿ ಸುದ್ದಿ:ಮಹಾ ಕುಂಭ ಮೇಳದಲ್ಲಿ ಈಗಾಗಲೇ ಸಿನಿಮಾ ಸೆಲೆಬ್ರಿಟಿಗಳೂ ಸೇರಿದಂತೆ ಕೋಟ್ಯಾಂತರ ಭಕ್ತರು ಪವಿತ್ರ ಕ್ಷಣದಲ್ಲಿ ಮಿಂದೆದ್ದಿದ್ದಾರೆ. ಇದೀಗ ರಾಜ್ ಬಿ ಶೆಟ್ಟಿ, ಅನುಶ್ರೀ ಸೇರಿ ಕೆಲ ಕನ್ನಡ ಸಿನಿ ಗಣ್ಯರು ಮಹಾಕುಂಭದಲ್ಲಿ ಭಾಗಿಯಾಗಿದ್ದಾರೆ.

ಅನುಶ್ರೀ ಪೋಸ್ಟ್ ನಲ್ಲಿ  ಹೇಳಿದ್ದೇನು: ”ಸಂಗಮದಲ್ಲಿ ಮಿಂದು, ಕಣ್ಣುಗಳು ನೆಂದು, ಭಗವಂತ ನೀನೆ ನಮಗೆಲ್ಲ ಅಂದು ಇಂದು ಇನ್ನೆಂದೆಂದು ಎಂದು ಬಂದು ಕೂತಾಗ ಮನಸ್ಸಿಗೆ ಸಿಕ್ಕ ನೆಮ್ಮದಿ ಸಿಗದು ಎಂದೆಂದು! ಕೋಟಿ ಜನ ಸೇರೋ ಜಾಗ, ಸಿಕ್ಕಾಪಟ್ಟೆ ಕಷ್ಟ ಯಾಕೆ ಬೇಕು ನಮಗೆ ಅಂತ ಮನೆಯಲ್ಲಿ ಕೂತಿದ್ರೆ ಈ ದೈವಿಕ ಅನುಭವ ಸಿಗ್ತಿರ್ಲಿಲ್ಲ! 29.01.2025 ಮೌನಿ ಅಮಾವಾಸ್ಯೆ, ಹರ ಹರ ಮಹದೇವ್!” ಎಂದು ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಿರೂಪಕಿ ಅನುಶ್ರೀ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಇಲ್ಲಿ ಕನ್ನಡ ಸಿನಿಗಣ್ಯರನ್ನು ಜೊತೆಯಾಗಿ ಕಾಣಬಹುದು.

ರಾಜ್ ಬಿ ಶೆಟ್ಟಿ ಪೋಸ್ಟ್ ನಲ್ಲಿ  ಹೇಳಿದ್ದೇನು: ಕುಂಭಮೇಳದಲ್ಲಿ ಭಾಗಿಯಾದ ಮೂರು ಫೋಟೋಗಳನ್ನು ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ ರಾಜ್ ಬಿ ಶೆಟ್ಟಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, ಮಹಾ ಕುಂಭ ಮತ್ತು ಭಾಗವಹಿಸಿದವರು ಎಂಬ ಕ್ಯಾಪ್ಷನ್ ನೀಡಿದ್ದಾರೆ.

ಆನ್ಲೈನ್ನಲ್ಲಿ ಈ ಪೋಸ್ಟ್ ಸಖತ್ ಸದ್ದು ಮಾಡುತ್ತಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ”ನೀವು ಈ ದೈವಿಕ ಕ್ಷಣವನ್ನು ಅನುಭವಿಸಿದ್ದಕ್ಕೆ ನನಗೆ ತುಂಬಾನೇ ಸಂತೋಷವಾಗಿದೆ” ಎಂದು ಓರ್ವರು ತಿಳಿಸಿದ್ದಾರೆ. ‘ಹೆಮ್ಮೆಯ ಕ್ಷಣ’ ಎಂದು ಅಭಿಮಾನಿಯೋರ್ವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರಾಜ್ ಬಿ ಶೆಟ್ಟಿ ವ್ಯಕ್ತಿತ್ವವನ್ನು ಗುಣಗಾನ ಮಾಡಿದ ಅಭಿಮಾನಿಯೋರ್ವರು, ‘ನಗೆಯಲ್ಲಿ ಸರಳತೆ, ತೂಕದ ವ್ಯಕ್ತಿತ್ವ’ ಎಂದು ತಿಳಿಸಿದ್ದಾರೆ. ‘ಶಿವ ಪರಮ ಶಿವನನ್ನು ಭೇಟಿಯಾದ ಕ್ಷಣ’ ಎಂದು ಓರ್ವರು ತಿಳಿಸಿದ್ದಾರೆ. ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಇವರ ಪೋಸ್ಟ್ಗೆ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನದ ಬಳಿಕ ಅನುಶ್ರೀ, ರಾಜ್‌ ಬಿ ಶೆಟ್ಟಿ ಹಾಗೂ ಸ್ನೇಹಿತರು ಅಯೋಧ್ಯೆ ರಾಮ ಮಂದಿರಕ್ಕೂ ಭೇಟಿ ನೀಡಲು ಮುಂದಾಗಿದ್ದಾರೆ. ಒಟ್ಟು 5 ದಿನಗಳ ಪ್ರವಾಸದಲ್ಲಿ ವಾರಣಾಸಿಗೂ ಹೋಗಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

Related Articles

Back to top button
error: Content is protected !!