ಆರ್ಥಿಕ

ಫೈನಾನ್ಸ್ ಸಾಲಗಾರರ ಕಿರುಕುಳ: ಬೊಲೆರೋ ವಾಹನಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ

Views: 112

ಕನ್ನಡ ಕರಾವಳಿ ಸುದ್ದಿ: ಫೈನಾನ್ಸ್ ಸಾಲಕೊಟ್ಟವರ ಕಾಟಕ್ಕೆ ನೊಂದ ವ್ಯಕ್ತಿಯೊಬ್ಬರು  ಬೊಲೆರೋ ವಾಹನಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗದಲ್ಲಿ ನಡೆದಿದೆ.

ಇಲ್ಲಿನ ಮಾರುತಿ ನಗರದಲ್ಲಿ ಈ ಘಟನೆ ನಡೆದಿದೆ. ರಫಿಕ್ ಬಾಬುಸಾಬ್ (38) ಆತ್ಮಹತ್ಯೆ ಮಾಡಿಕೊಂಡವರು.

ರಫಿಕ್ ಸಾಲ ಮಾಡಿ ಬೊಲೆರೋ ವಾಹನ ಖರೀದಿಸಿದ್ದರು. ವಾರದ ರೀತಿಯಲ್ಲಿ ಬಡ್ಡಿ ತೀರಿಸುವುದಾಗಿ ಹೇಳಿದ್ದರು. ಸಾಲಗಾರರ ಕಿರುಕುಳ ಹೆಚ್ಚುತ್ತಿದ್ದಂತೆ ತಾವು ಖರೀದಿಸಿದ್ದ ಬೊಲೆರೋ ವಾಹನಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Related Articles

Back to top button
error: Content is protected !!