ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಮತ್ತು ಪಂಚಾಯತ್ ರಾಜ್ ಮಾಹಿತಿ

Views: 0
ಕುಂದಾಪುರ : ಕೋಟ ಪಡುಕೆರೆ ಶ್ರೀ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದಜೆ೯ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನೆ ವಾಷಿ೯ಕ ವಿಶೇಷ ಶಿಬಿರ ವಕ್ವಾಡಿ ಸ. ಹಿ. ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಶೈಕ್ಷಣಿಕ ಕಾಯ೯ಕ್ರಮದ ಅಂಗವಾಗಿ ಗುರುವಾರ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಹಾಗೂ ಪಂಚಾಯತ್ ರಾಜ್ ಮಾಹಿತಿ ಕಾಯ೯ಕ್ರಮ ನಡೆಯಿತು.
ಕುಂದಾಪುರ ತಾಲೂಕು ವಿಕೇಂದ್ರಿಕೃತ ತರಬೇತಿ ಸಂಯೋಜಕ ಮೋಹನ್ ಚಂದ್ರ ಕಾಳಾವರ್ಕರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಜನ ಭಾಗವಹಿಸಬೇಕಾದರೆ ಪ್ರಾಥಮಿಕ ವೇದಿಕೆಯೇ ಪಂಚಾಯತ್ ,ಗ್ರಾಮ ಪಂಚಾಯತ್ ಎಲ್ಲಾ ರೀತಿಯ ಅಸಾಯಕತೆ ವ್ಯವಸ್ಥೆಯನ್ನು ಸಾಮಾಜಿಕ ನ್ಯಾಯದ ಅಡಿಯಲ್ಲಿ ಜನರೇ ನೇರವಾಗಿ ಬಾಗವಹಿಸುವಿಕೆ ಅತ್ಯಗತ್ಯ,ನಾಗರಿಕ , ಬದುಕುವ, ರಕ್ಷಣೆಯ ಹಕ್ಕು, ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು.
ಕುಂದಾಪುರ ಪೊಲೀಸ್ ಠಾಣಾ ಸಹಾಯಕ ಉಪ ನಿರೀಕ್ಷಕರಾದ ಸುಧಾಕರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಸಮಾಜದಲ್ಲಿ ಸುವ್ಯವಸ್ಥೆ ಇರಬೇಕಾದರೆ ಕಾನೂನು ಅತ್ಯಗತ್ಯ, ಶಾಂತಿ ಸೌಹಾದ೯ತೆಗಾಗಿ ಕಾನೂನಿನ ಅರಿವು ಇದ್ದಾಗ ಸಮಾಜದಲ್ಲಿ ಅಪರಾದಗಳನ್ನು ಕಡಿಮೆಯಾಗಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯ ಎಂದರು.
ಪತ್ರಕತ೯ ಸುಧಾಕರ ವಕ್ವಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಡಾ. ಮನೋಜ್ ಕುಮಾರ್, ಉಪನ್ಯಾಸಕರಾದ ವಕ್ವಾಡಿ ರಂಜಿತ್ ಶೆಟ್ಟಿ, ಉಷಾ, ಮಮತ, ಶ್ವೇತ, ಮಹಾದೇವಿ, ಸುಮಶ್ರೀ ಇದ್ದರು.
ಸಿಂಚನಾ ಸ್ವಾಗತಿಸಿದರು. ಯಶಿಕಾ ರಮೇಶ್ ಪುತ್ರನ್ ನಿರೂಪಿಸಿದರು. ಸಂಕೇತ್ ವಂದಿಸಿದರು.