ಮೂಡದ ಒಮ್ಮತ : ಹೈಕಮಾಂಡ್ ಅಂಗಳದಲ್ಲಿ ಸಚಿವ ಸಂಪುಟ ಕಸರತ್ತು

Views: 0
ಸಿಎಂ ಆಯ್ಕೆಪ್ರಕ್ರಿಯ ಆರಂಭಗೊಂಡಾಗಿನಿಂದಲೂ ಹಠಕ್ಕೆ ಬಿದ್ದಿದ್ದ ಡಿ.ಕೆ.ಸಿ ಸೋನಿಯಾ ಗಾಂಧಿ ಮಾತಿಗೆ ಕಟ್ಟುಬಿದ್ದು ಡಿಸಿಎಂ ಸ್ಥಾನವನ್ನು ಒಪ್ಪಿಕೊಂಡಿದ್ದರು. ಆದರೆ, ಇದೀಗ ಸಿದ್ದರಾಮಯ್ಯ ಅವರೇ, ಪೂಣ೯ವಧಿ ಮುಖ್ಯಮಂತ್ರಿ ಎನ್ನುವ ವಾದವನ್ನು ಆಪ್ತರ ಮೂಲಕ ತೇಲಿಬಿಡುತ್ತಿದ್ದಾರೆ ಎನ್ನುವುದು ಡಿಕೆಸಿ ಆಕ್ಷೇಪ, ಇದಕ್ಕೆ ಹೈಕಮಾಂಡ್ ವರಿಷ್ಠರು, ಮೊದಲು ಸರಕಾರವನ್ನು ಪೂಣ೯ ಪ್ರಮಾಣದಲ್ಲಿ ರಚಿಸಿ, ಸಣ್ಣ ಪುಟ್ಟ ಗೊಂದಲಗಳನ್ನು ಅಲ್ಲಿಯೇ ಬಗೆಹರಿಸಿಕೊಳ್ಳಿ ಎನ್ನುವ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ ಒಂದು ಪಟ್ಟಿ ತಯಾರು ಮಾಡಿಕೊಂಡಿದ್ದರೆ, ಸಿದ್ದರಾಮಯ್ಯ ಹಾಗೂ ಡಿಕೆಸಿ ತಮ್ಮದೇ ಪಟ್ಟಿಯನ್ನು ಸಿದ್ದಪಡಿಸಿಕೊಂಡಿದ್ದಾರೆ, ಹೀಗಾಗಿ ಮೂರು ಪಟ್ಟಿ ತಾಳೆಯಾಗದ ಕಾರಣ 8 ರಿಂದ 10 ಮಂದಿ ಹೊರತು ಪಡಿಸಿದರೆ, ಉಳಿದ ಅಭ್ಯಥಿ೯ಗಳ ವಿಷಯದಲ್ಲಿ ಎರಡು ಕಡೆಯಿಂದ ಒಮ್ಮತ ಮಾಡುತ್ತಿಲ್ಲ.
ಈಗಿರುವ 20 ಸಚಿವ ಸ್ಥಾನಕ್ಕೆ 48 ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಿರುವುದು ಬಹುದೊಡ್ಡ ತಲೆನೋವಾಗಿದೆ. ದೆಹಲಿಯಲ್ಲಿ ದೂರು, ಪ್ರತಿ ದೂರುಗಳ ಕಾರ್ಯ ಮುಗಿದಿದ್ದು, ಗುರುವಾರ ಬೆಳಿಗ್ಗೆ ಅಥವಾ ಮಧ್ಯಾಹ್ನ ವೇಳೆಗೆ ಪಕ್ಷದ ಹೈಕಮಾಂಡ್ ಇಬ್ಬರೂ ನಾಯಕರನ್ನು ಕರೆಸಿಕೊಂಡು ಸಂಪುಟ ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ, ಎಲ್ಲವು ಅಂದುಕೊಂಡಂತೆ ನಡೆದರೆ ಶನಿವಾರ ಇನ್ನುಳಿದ 20 ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಒಂದು ವೇಳೆ ತಿಕ್ಕಾಟ ಬಗೆಹರಿಯದಿದ್ದರೆ ಬಾನುವಾರ ಸಂಜೆಯೊಳಗೆ ಈ ಕಾರ್ಯಕ್ರಮ ಪೂಣ೯ಗೊಳಿಸಲು ತೀಮಾ೯ನಿಸಲಾಗಿದೆ ಎಂದು ಮೂಲಗಳಿಂದ ತಿಳಿಯಲಾಗಿದೆ.






