ರಾಜಕೀಯ

ಶಾಸಕಾಂಗ ಸಭೆಯಲ್ಲಿ ಸಿದ್ದು ಮತ್ತು ಡಿಕೆಸಿ ಶಾಸಕರಿಗೆ ಕ್ಲಾಸ್ 

Views: 4

ವಿಧಾನ ಸಭೆ ಚುನಾವಣೆಯಲ್ಲಿ ಗೆದ್ದೆವು ಎಂದು ಸುಮ್ಮನೆ ಕುಳಿತರೆ ಸಾಲದು, ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ 20 ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು, ಈ ಗೆಲುವಿನ ಯಾನ ಮಂದುವರಿದು ಬಿಬಿಎಂಪಿ ಚುನಾಯಲ್ಲಿಯೂ ಇದೇ ರೀತಿಯ ಗೆಲುವು ನಮ್ಮದಾಗಬೇಕು ಎಂದು ಇಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಶಾಸಕರಿಗೆ ಹೇಳಿದರು.

ಎಲ್ಲರಿಗೂ ಅಧಿಕಾರ ಸಿಗದಿರಬಹುದು. ಆದರೆ, ನಿಮ್ಮ ಶ್ರಮಕ್ಕೆ ಗೌರವ ಸಿಕ್ಕಿಯೇ ಸಿಗುತ್ತದೆ. ಪಕ್ಷದ ಕೆಲಸವನ್ನು ದೇವರ ಕೆಲಸ ಎಂದು ಮಾಡಬೇಕು, ನಮ್ಮನ್ನು ಗೆಲ್ಲಿಸಿದ ಕಾರ್ಯಕತ೯ರನ್ನು ಮರೆಯದೆ ರಾಜ್ಯದ ಜನರಿಗೆ ಸ್ವಚ್ಛ ಆಡಳಿತ ನೀಡಬೇಕೆಂದು ಸಲಹೆ ನೀಡಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿ, ಕೇಂದ್ರದ ಅನುದಾನ ಬಿಡುಗಡೆಗೆಯಲ್ಲಿ ತಾರತಮ್ಯ ಆಗಿದೆ. ಕೇಂದ್ರ ಅನುಸರಿಸುತ್ತಿರುವ ತಾರತಮ್ಯ ನೀತಿಯನ್ನು ಜನರ ಮುಂದೆ ಹೋಗುವ, ಮುಂದಿನ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಜನಪರ ಕೆಲಸ ಮಾಡೋಣ ಎಂದು ಶಾಸಕರಿಗೆ ಕಿವಿಮಾತು ಹೇಳಿದರು.

Related Articles

Back to top button
error: Content is protected !!