ಜನಮನ

ಕುಂದಾಪುರ ಡ್ರೈವರ್‌ ಇಲ್ಲದ ಬಸ್ಸು ಚಲಾಯಿಸಿ ಕಾರಿಗೆ ಡಿಕ್ಕಿ: ತಪ್ಪಿದ ಭಾರೀ ಅವಘಡ

Views: 252

ಕುಂದಾಪುರ : ಡ್ರೈವರ್‌ ಇಲ್ಲದೆ ಬಸ್ಸೊಂದು ಚಲಾಯಿಸಿ ನಿಂತಿದ್ದ ಕಾರಿಗೆ ಡಿಕ್ಕಿಹೊಡೆದ ಘಟನೆ  ಜ.13 ರಂದು ಬೆಳಿಗ್ಗೆ ಕುಂದಾಪುರ ನಗರದ ಹೊರವಲಯದ ಹಂಗಳೂರು ಎಂಬಲ್ಲಿ ನಡೆದಿದೆ.

ಡಿಪೋದಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಚಾಲಕನಿಲ್ಲದೆಯೇ ಚಲಾಯಿಸಿ ಎರಡು ಸರ್ವೀಸ್ ರೋಡ್ ಹಾಗೂ ಹೆದ್ದಾರಿ ಬ್ಯಾರಿಕೇಡ್ ದಾಟಿ ಹೋಟೆಲೊಂದರ ಮುಂದೆ ನಿಲ್ಲಿಸಿದ್ದ ಕಾರಿಗೆ  ಬೆಳಿಗ್ಗೆ  ಡಿಕ್ಕಿ ಹೊಡೆದು ನಿಂತಿದೆ.

ಬಸ್ ಕ್ಲೀನ್  ಮಾಡಿದ ಸಿಬ್ಬಂದಿಗಳು ಬಸ್ಸಿಂದ ಇಳಿದಿದ್ದರು. ಇದಾದ ಬಳಿಕ ಡಿಪೋದಿಂದ ಬಸ್ಸು ಮುಂದಕ್ಕೆ ಚಲಿಸಿ ಸರ್ವೀಸ್ ರಸ್ತೆಗೆ ಅಡ್ಡಲಾಗಿದ್ದ ಬ್ಯಾರಿಕೇಡ್ ಮುರಿದು ಸಾಗಿದೆ. ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಯಲ್ಲಿ ವಾಹನಗಳು ಕಡಿಮೆಯಾಗಿದ್ದರಿಂದ ಜೊತೆಗೆ ಪಾದಚಾರಿಗಳ ಓಡಾಟ ಅಷ್ಟಾಗಿ ಇರದ ಕಾರಣ ಭಾರೀ ಅವಘಡ ತಪ್ಪಿದೆ.

ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button
error: Content is protected !!