ಶಿಕ್ಷಣ

ಶುಭದಾ ಆಂಗ್ಲ ಮಾಧ್ಯಮ ಶಾಲೆ: ಸಾವಿತ್ರಿಬಾ ಪುಲೆ ಜಯಂತಿ ಆಚರಣೆ

Views: 330

ಕನ್ನಡ ಕರಾವಳಿ ಸುದ್ದಿ, ಕಿರಿಮಂಜೇಶ್ವರ: ಜ.3 ರಂದು ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಾವಿತ್ರಿಬಾ ಪುಲೆ ಅವರ ಜನ್ಮ ದಿನವನ್ನು ಆಚರಿಸಲಾಯಿತು. 

ಸಮಾಜ ವಿಜ್ಞಾನ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಅವರು ತಮ್ಮ ಪ್ರಾಸ್ತಾವಿಕವಾಗಿ ಮಾತನಾಡಿ, ಸಾವಿತ್ರಿ ಬಾ ಪುಲೆಯವರು ಕೈಗೊಂಡ ಸಾಮಾಜಿಕ ಪುನರ್ ನವೀಕರಣ ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯ ಫಲಿತಾಂಶವಾಗಿ 18 ಮಹಿಳಾ ಶಾಲೆಗಳು ನಿರ್ಮಾಣವಾಗಿರುವುದರ ಬಗ್ಗೆ ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡ ಶುಭದಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಕುಮಾರಿ ದೀಪಿಕಾ ಆಚಾರ್ಯ ಅವರು ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಹಾಗೂ ಸಮಾಜ ಸುಧಾರಕಿ ಸಾವಿತ್ರಿಬಾಪುಲೆ ಅವರ ಶಿಕ್ಷಣ ಕ್ಷೇತ್ರದಲ್ಲಿನ ಕ್ರಾಂತಿಕಾರಿ ಚಳುವಳಿ,ಸ್ತ್ರೀ ವಿಮೋಚನೆಯ ಬಗ್ಗೆ ತಿಳಿಸುತ್ತಾ ವಿದ್ಯಾರ್ಥಿಗಳಿಗೆ ಶಿಕ್ಷಣದ ಪ್ರಾಮುಖ್ಯತೆಯನ್ನು ತಿಳಿಸಿದರು.

ಸಮಾರಂಭದಲ್ಲಿ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.

 ಶಿಕ್ಷಕಿ ರಮ್ಯಾ ಸ್ವಾಗತಿಸಿದರು. ಶ್ರೀಮತಿ ಆಶಾಲತಾ ಶೆಟ್ಟಿ ವಂದಿಸಿದರು. ದೀಪಿಕಾ ದೇವಾಡಿಗ ನಿರೂಪಿಸಿದರು.

Related Articles

Back to top button
error: Content is protected !!